ಜೀವನದ ಕೊನೆಯವರೆಗೂ ಜೊತೆಯಾಗಿ ಇರುತ್ತೇವೆ ಎಂದು ಕೈ ಹಿಡಿದ ಜೋಡಿಗಳು ಮದುವೆಯಾದ ಕೆಲವೇ ವರ್ಷಗಳಲ್ಲಿ ದೂರ ದೂರವಾಗುತ್ತಾರೆ. ಇಂದು ಸಣ್ಣ ಪುಟ್ಟ ಕಾರಣಗಳಿಗೂ ದಂಪತಿಗಳು ದೂರ ದೂರವಾಗುತ್ತಿದ್ದಾರೆ. ಇಲ್ಲೋರ್ವ ಮಹಿಳೆ ಪತಿಯಿಂದ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಇದರಿಂದ ಕೋಪಗೊಂಡ ಪತಿ ತಾನು ಹಿಂದೆ ನೀಡಿದ್ದ ಕಿಡ್ನಿಯನ್ನು ವಾಪಸ್ ನೀಡುವಂತೆ ಕೇಳಿದ್ದಾನೆ.
ಆತನ ಹೆಸರು ಡಾ. ರಿಚರ್ಡ್ ಬಟಿಸ್ಟಾ. ವಿಚ್ಛೇದನ ದ ವೇಳೆ ಈತ ತನ್ನ ಪತ್ನಿಯಿಂದ ಕಿಡ್ನಿ ವಾಪಸ್ ಕೇಳಿದ್ದಾನೆ. ಕಿಡ್ನಿ ವಾಪಸ್ ನೀಡಿಲ್ಲವೆಂದ್ರೆ 1.2 ಮಿಲಿಯನ್ ಪೌಂಡ್ ನೀಡುವಂತೆ ಬೇಡಿಕೆ ಇಟ್ಟಿದ್ದ.
1990 ರಲ್ಲಿ ಡೊನ್ನೆಲ್ ಮತ್ತು ರಿಚರ್ಡ್ ಬಟಿಸ್ಟಾಗೆ ಮದುವೆ ಆಗಿತ್ತು. ಇಬ್ಬರಿಗೆ ಮೂರು ಮಕ್ಕಳಿದ್ದು, ಡೊನ್ನೆಲ್ ಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಸಂಬಂಧದಲ್ಲಿ ಬಿರುಕು ಮೂಡಿತ್ತು.
2001 ರಲ್ಲಿ ಡೊನ್ನೆಲ್ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಆಕೆಯ ಎರಡೂ ಕಿಡ್ನಿ ಫೇಲ್ ಆಗಿತ್ತು. ಈ ಸಂದರ್ಭದಲ್ಲಿ ಪತ್ನಿ ಜೀವ ಹಾಗೂ ವೈವಾಹಿಕ ಸಂಬಂಧ ಮುಖ್ಯ ಎಂಬ ಕಾರಣಕ್ಕೆ ಬಟಿಸ್ಟಾ ತನ್ನ ಹೆಂಡತಿಗೆ ಮೂತ್ರಪಿಂಡವನ್ನು ದಾನ ಮಾಡಿದ್ದ. ಆದ್ರೆ ರಿಚರ್ಡ್ ಬಟಿಸ್ಟಾ ಪ್ರೀತಿ, ತ್ಯಾಗಕ್ಕೆ ಮೋಸವಾಗಿತ್ತು. ಆತ ನಂಬಿದ್ದ ಪತ್ನಿ ಆತನಿಗೆ ಮೋಸ ಮಾಡಿದ್ದಳು. ಡೊನ್ನೆಲ್, ಪತಿ ರಿಚರ್ಡ್ ನಿಂದ ದೂರವಾಗುವ ನಿರ್ಧಾರ ಕೈಗೊಂಡಿದ್ದಳು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಇದರಿಂದ ರಿಚರ್ಡ್ ಗೆ ನಿರಾಶೆಯಾಗಿತ್ತು. ಪತ್ನಿ ಡೊನ್ನೆಲ್ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ರಿಚರ್ಡ್ ಆರೋಪ ಮಾಡಿದ್ದ. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಕಿಡ್ನಿ ವಾಪಸ್ ನೀಡುವಂತೆ ಕೇಳಿದ್ದ. ಪತ್ನಿ ಡೊನ್ನೆಲ್ ಕಿಡ್ನಿ ವಾಪಸ್ ನೀಡಿಲ್ಲವೆಂದಾದ್ರೆ ಹಣ ನೀಡಬೇಕೆಂದು ತಾಕೀತು ಮಾಡಿದ್ದ.
ಆದ್ರೆ ನ್ಯಾಯಾಲಯದಲ್ಲಿ ರಿಚರ್ಡ್ ಗೆ ನ್ಯಾಯ ಸಿಗಲಿಲ್ಲ. ಕಿಡ್ನಿಯನ್ನು ವಾಪಸ್ ನೀಡಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದರು. ಡೊನ್ನಲ್ ಗೆ, ರಿಚರ್ಡ್ ಕಿಡ್ನಿಯನ್ನು ಹಾಕಲಾಗಿದೆ. ಅದನ್ನು ಮತ್ತೆ ತೆಗೆಯೋದು ಸುಲಭವಲ್ಲ. ಒಂದ್ವೇಳೆ ಕಿಡ್ನಿ ತೆಗೆದಲ್ಲಿ ಡೊನ್ನಲ್ ಸಾವನ್ನಪ್ಪುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದರು. ಕಿಡ್ನಿ ರಿಚರ್ಡ್ ನದ್ದಾಗಿದ್ದರೂ ಈಗ ಅದು ಡೊನ್ನಲ್ ದೇಹದಲ್ಲಿದೆ. ಅಂದ್ಮೇಲೆ ಡೊನ್ನಲ್ ಕಿಡ್ನಿ ಮಾಲೀಕಳಾಗುತ್ತಾಳೆ ಎಂದು ತಜ್ಞರು ಹೇಳಿದ್ದರು.