ಬೆಂಗಳೂರು: ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟ, ಕರ್ನಾಟಕ ಸಂಘಟನೆಗಳ ಸಮಿತಿ ಹಾಗು ವಿವಿಧ ಕನ್ನಡ ಒಕ್ಕೂಟ ಮತ್ತು ಸಂಘಟನೆಗಳೊಂದಿಗೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಜಾಗೃತಿ ಅಭಿಯಾನಕ್ಕೆ ನಗರ ದೇವೆತೆ ಅಣ್ಣಮ್ಮ ದೇವಾಲಯದಿಂದ ಪೂಜೆ ಸಲ್ಲಿಸಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಕನ್ನಡ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ನಟರಾಜ್ ಬೊಮ್ಮಸಂದ್ರ, ಕನ್ನಡಪರ ಹೋರಾಟಗಾರರಾದ ಪಾಲನೇತ್ರ. ವೈಭವ ಕರ್ನಾಟಕ ಸಂಘಟನೆ ಅಧ್ಯಕ್ಷರಾದ ಟಿ.ವೆಂಕಟೇಶ್ ಗೌಡ, ಅಂಬೇಡ್ಕರ್ ಮಾನವ ಹಕ್ಕುಗಳ ವೇದಿಕೆ ರಾಜ್ಯಾಧ್ಯಕ್ಷರಾದ ಕ್ರಾಂತಿ ರಾಜು ಮತ್ತು ಸಮಿತಿ ಅಧ್ಯಕ್ಷರಾದ ಮೇಲುಕೋಟೆ ಬೆಟ್ಟಸ್ವಾಮಿ ಗೌಡ ಹಾಗು ವಿವಿಧ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಕನ್ನಡ ನಾಮಫಲಕ ಕಡ್ಡಾಯ ಜಾರಿ ಮತ್ತು ಜನಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.
ಕನ್ನಡ ಭಾಷೆ ಲಿಪಿಗಳ ರಾಣಿ ಮತ್ತು 2500ವರ್ಷಗಳ ಇತಿಹಾಸವಿದೆ. ಇಂದು ರಾಜ್ಯದಲ್ಲಿ ನಾಮಫಲಕ ಆಳವಡಿಕೆ ಮಾಡಲು ಮೀನಮೇಷ ಏಣಿಸುತ್ತಿದ್ದಾರೆ.ಕನ್ನಡ ನಾಡು,ನುಡಿ,ಜಲ ಕುರಿತು ಸಮಸ್ಯೆಗಳು ಬಂದಾಗ ಎದುರಿಸಲು ಕನ್ನಡ ಕಟ್ಟಾಳು ಸದಾ ಮುಂದೆ ನಿಂತು ಹೋರಾಟ ಮಾಡುತ್ತಾರೆ.
ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಎಲ್ಲ ಮಳಿಗೆ, ಅಂಗಡಿ ಮತ್ತು ಮಾಲ್ ಗಳಲ್ಲಿ ನಾಮಫಲಕ ಕಡ್ಡಾಯವಾಗಿ ಶೇಕಡ 60%ರಷ್ಟು ಹಾಕುಬೇಕು, ನಂತರ ಅನ್ಯ ಭಾಷೆ ಅವಕಾಶ ಎಂದು ಕಾಯಿದೆ ತಂದು ಕಾನೂನಿ ಮಾಡಿದ್ದಾರೆ.
ಸರ್ಕಾರ ಮತ್ತು ಬಿಬಿಎಂಪಿ ಕನ್ನಡ ನಾಮಫಲಕ ಹಾಕದೇ ಇರುವ ಅಂಗಡಿಗಳಿಗೆ ಬೀಗ ಹಾಕಬೇಕು, ಪರವಾನಗಿ ರದ್ದು ಮಾಡಬೇಕು ಮತ್ತು ನಾಮಫಲಕ ಆಳವಡಿಸಿದ ಮೇಲೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಬೇಕು.
ಕನ್ನಡ ನಾಮಫಲಕ ಕಡ್ಡಾಯ ಜಾರಿಗೊಳಿಸಲು ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕನ್ನಡ ಸಂಘಟನೆಗಳ ಒಕ್ಕೂಟದವರು ತಿಳಿಸಿದರು.