ಕಲಘಟಗಿ: ಭತ್ತದ ಕಣಜ, ತೊಟ್ಟಿಲ ನಗರಿ, ಕಲ್ಲು ಕಟ್ಟಿಗೆಯ ನಾಡು ಎಂದೆ ಪ್ರಸಿದ್ದಿ ಪಡೆದಿರುವ ಕಲಘಟಗಿ ಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಥಯಾತ್ರೆಗೆ ವಿವಿಧ ಇಲಾಖೆ ಸಿಬ್ಬಂದಿಗಳು ಹಾಗೂ ಕನ್ನಡ ಪರ ಅಭಿಮಾನಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು
ಬಮ್ಮಿಗಟ್ಟಿ ಸರ್ಕಲ್ ನಲ್ಲಿ ಸಮ್ಮೇಳನದ ರಥದಲ್ಲಿನ ಕನ್ನಡದ ತಾಯಿ ಶ್ರೀ ಭುವನೇಶ್ವರಿ ಮೂರ್ತಿಗೆ ಅದ್ದೂರಿ ಪೂಜೆಯ ಮುಖಾಂತರ ಭವ್ಯವಾಗಿ ಸ್ವಾಗತ ಕೋರಿದರು.
ಕಲಾತಂಡದವರಿಂದ ಡೊಳ್ಳು ಮೆರವಣಿಗೆ ಮುಖಾಂತರ ಸಂಚರಿಸಿ. ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಲಿಂಗರಾಜ್ ಅಂಗಡಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಕಾಲ ಜರುಗಲಿದ್ದು,ಜಿಲ್ಲೆಯವಿವಿಧ ತಾಲೂಕಿನ ಕನ್ನಡ ಪರ ಅಭಿಮಾನಿಗಳು ಭಾಗವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ವೀರೇಶ ಮುಳಗುಂದಮಠ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣ, ಸಿಪಿಐ ಶ್ರೀಶೈಲ ಕೌಜಲಗಿ, ಬಸವರಾಜ ಯದ್ದಲಗುಡ್ಡ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವ ಬಸಾಪುರ, ಶಾಸಕರ ಕಾರ್ಯದರ್ಶಿ ಹರೀಶ್ ಬ್ಲೂಕರ್ಮ, ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಬಾಳು ಖಾನಾಪುರ, ಯುವ ಮುಖಂಡ ಪಿ.ಪ್ರಮೋದ ಪಾಲಕರ, ಪಿ. . ಮಾಲೀಕರಾದ ಗಂಗಾಧರ ಗೌಳಿ ಉಪಸ್ಥಿತರಿದ್ದರು.