ಬೆಂಗಳೂರು:- ನಮ್ಮ ಬೇರು ಪುನಃ ಗಟ್ಟಿಗೊಳಿಸಲು ಮಂಡ್ಯ ಜನತೆಯೇ ನೆರವಾಗಲಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ಎನ್ ಡಿಎ ಸರ್ಕಾರ ರಚನೆಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಮಂತ್ರಿಯಾಗಲು ತಮ್ಮ ಪಕ್ಷ ಅಳಿಲು ಸೇವೆ ಸ್ಲಲಿಸುತ್ತಿದೆ ಎಂದು ಅವರು ಹೇಳಿದರು. ತಮ್ಮ ಪಕ್ಷದ ಅಸ್ತಿತ್ವ ಉಳಿದು ಅದರ ಬೇರು ಗಟ್ಟಿಗೊಳ್ಳಲು ತಾವು ಬಿಜೆಪಿ ಜೊತೆ ಮೈತ್ರಿ ಬೆಳೆಸಿರುವುದಾಗಿ ಹೇಳಿದ ಕುಮಾರಸ್ವಾಮಿ ತಮ್ಮ ಪಕ್ಷ ಮೊದಲಿನ ಹಾಗೆ ಬೆಳೆಯಲು ಮಂಡ್ಯದ ಜನತೆ ನೆರವಾಗಲಿದ್ದಾರೆ ಯಾಕೆಂದರೆ ಮಂಡ್ಯ ಜೆಡಿಎಸ್ ಪಕ್ಷದ ಹೃದಯ ಎಂದರು. 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನೈತಿಕ ಗೆಲುವು ಸಿಕ್ಕಿದೆ, ಅಂಕಿ-ಅಂಶಗಳ ಆಧಾರದಲ್ಲಿ ಪಕ್ಷ ಸೋತಿರಬಹುದು, ಅದರೆ ತಾಂತ್ರಿಕವಾಗಿ, ನೈತಿಕವಾಗಿ ತಾವು ಗೆದ್ದಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರಗಳಿಂದ ತಾನ್ಯಾವತ್ತೂ ದೂರವಾಗಲ್ಲ ಎಂದು ಹೇಳಿದ ಕುಮಾರಸ್ವಾಮಿ ಆ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಿದ್ದೇ ತಾನು ಎಂದರು.