ತಮಿಳು ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿದ್ದಾರೆ. ಇದು ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಇದೀಗ ಬೈಲ್ವಾನ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಅನೇಕ ಕಲಾವಿದರು ರಂಗನಾಥನ್ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ. ಆದರೂ ರಂಗನಾಥನ್ ಅವರು ಚಿತ್ರರಂಗದ ಕುರಿತು ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಇದೀಗ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಅರೆಬೆತ್ತಲೆ ಫೋಟೋ ಹಂಚಿಕೊಳ್ಳುವುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ರಂಗನಾಥ್ ಆಡಿರುವ ಮಾತುಗಳು ವಿವಾದ ಸೃಷ್ಟಿಸಿವೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೊಸದಾಗಿ ಹಂಚಿಕೊಂಡಿರುವ ವಿಡಿಯೋದಲ್ಲಿ ಚಿತ್ರರಂಗದಲ್ಲಿ ನಡೆಯುತ್ತದೆ ಎನ್ನಲಾದ ಅನೇಕ ಸಂಗತಿಗಳನ್ನು ರಂಗನಾಥ್ ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ವೈಯಕ್ತಿಕ ನೈತಿಕತೆ 100ಕ್ಕೆ 99 ರಷ್ಟು ಕೂಡ ಇಲ್ಲ. ಇಲ್ಲಿ ನಾನು ಹೇಳುತ್ತಿರುವ ಎಲ್ಲ ವಿಷಯಗಳಿಗೂ ನನ್ನ ಬಳಿ ಪುರಾವೆ ಇದೆ. ನಟಿಯರು ಸಿನಿಮಾ ಅವಕಾಶಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ನಾನು ಅದರ ಬಗ್ಗೆ ಮಾತನಾಡಿದರೆ ತಪ್ಪೇನು ಎಂದು ನನ್ನನ್ನು ಪ್ರಶ್ನಿಸುತ್ತಿದ್ದಾರೆ ಎಂದಿದ್ದಾರೆ.
ನಾನು ಚಿತ್ರರಂಗದಲ್ಲಿ ಎಲ್ಲರನ್ನೂ ಟೀಕಿಸುತ್ತಿದ್ದೇನೆಯೇ? ನೈತಿಕತೆ ಇಲ್ಲದವರನ್ನು ಮಾತ್ರ ನಾನು ಟೀಕಿಸುತ್ತಿದ್ದೇನೆ. ವೈಯಕ್ತಿಕ ನೈತಿಕತೆ ಎಂದರೇನು? ಪ್ರತಿಯೊಬ್ಬ ಮನುಷ್ಯನು ಸತ್ಯ ಮತ್ತು ಆತ್ಮಸಾಕ್ಷಿಯೊಂದಿಗೆ ಬದುಕಬೇಕು. ಆದರೆ, ಸಿನಿಮಾದಲ್ಲಿ ವ್ಯಕ್ತಿಗತ ನೈತಿಕತೆ 100ಕ್ಕೆ 99 ಪರ್ಸೆಂಟ್ ಕೂಡ ಇಲ್ಲ. ನಾನು ಏನೇ ಮಾತನಾಡಿದರೂ ಸಾಕ್ಷಿ ಸಮೇತ ಮಾತನಾಡುತ್ತೇನೆ ಮತ್ತು ನಾನು ನೋಡಿದ್ದನ್ನು ಮಾತ್ರ ಮಾತನಾಡುತ್ತೇನೆ. ಸಿನಿಮಾರಂಗದಲ್ಲಿ ಇದ್ದುಕೊಂಡು ಸಿನಿಮಾ ಬಗ್ಗೆ ಹೀಗೆಲ್ಲಾ ಮಾತಾಡ್ತೀರಲ್ಲ ಇದು ಸರಿನಾ ಎಂದು ಬಹಳಷ್ಟು ಜನ ಕೇಳುತ್ತಾರೆ. ಸಿನಿಮಾದಲ್ಲಿ ಇದ್ದುಕೊಂಡು ಅಲ್ಲಿನ ನ್ಯೂನತೆಗಳ ಬಗ್ಗೆ ಮಾತನಾಡುವುದು ತಪ್ಪೇ? ನಾನೇಕೆ ಹೇಳಬಾರದು? ಎಂದು ರಂಗನಾಥ್ ಪ್ರಶ್ನೆ ಮಾಡಿದರು.
ಅವಕಾಶಕ್ಕಾಗಿ ಅನೇಕ ನಟಿಯರು ತಮ್ಮ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಇದು ವೈಯಕ್ತಿಕ ನೈತಿಕತೆಯೇ? ನೀವೇ ಇಂತಹ ಪೋಸ್ಟ್ ಮಾಡುವುದು ತಪ್ಪಲ್ಲ ಆದರೆ, ನಾನಿದನ್ನು ಪ್ರಶ್ನೆ ಮಾಡಿದರೆ ತಪ್ಪೇ? ಬೆಳಗ್ಗೆ ಹೊತ್ತು ಅಣ್ಣ ಎಂದು ಕರೆಯುತ್ತಾರೆ ಆದರೆ, ರಾತ್ರಿ ಸಮಯದಲ್ಲಿ ಮಾವ ಅಥವಾ ಅಂಕಲ್ ಎಂದು ಕರೆಯುವ ಎಷ್ಟೋ ಮಂದಿ ಸಿನಿಮಾದಲ್ಲಿ ಇದಾರೆ ಎಂದರು ರಂಗನಾಥನ್ ಹೇಳಿದರು.
ಸಿನಿಮಾದಲ್ಲಿ ಇರುವುದೆಲ್ಲ ತಪ್ಪಲ್ಲ. ಆನಂದರಾಜ್ ಮತ್ತು ನಾಡಿಯಾ ಅವರಂತಹ ಅಸಾಧಾರಣ ವ್ಯಕ್ತಿಗಳು ಇನ್ನೂ ಇದ್ದಾರೆ. ಅನೇಕ ನಟ-ನಟಿಯರು ತಮ್ಮ ವಾರಸುದಾರರನ್ನು ಸಿನಿಮಾದಲ್ಲಿ ನಟಿಸಲು ಬಯಸುವುದಿಲ್ಲ. ಇದಕ್ಕೆಲ್ಲ ಅವರ ಜೀವನದಲ್ಲಿ ಆದ ಅನುಭವವೇ ಕಾರಣ ಎಂದರು. ಅಲ್ಲದೆ, ನೈತಿಕತೆ ಇಲ್ಲದ ನಟ-ನಟಿಯರ ಬಗ್ಗೆ ನಾನು ಮಾತನಾಡುತ್ತಲೇ ಇರುತ್ತೇನೆ. ಇದು ಮುಂದುವರಿಯುತ್ತದೆ. ನನ್ನನ್ನು ಟೀಕಿಸಿದರೆ ದೂರುದಾರರ 4 ಬೆರಳುಗಳು ಅವರನ್ನು ದೂರುತ್ತವೆ ಎಂದು ರಂಗನಾಥನ್ ಹೇಳಿದ್ದಾರೆ.