ಅವರೆಲ್ಲ ದಿನನಿತ್ಯ ರೋಗಿಗಳ ಸೇವೆ ಮಾಡೋ ವೈದ್ಯರು ಹಾಗೂ ವಿದ್ಯಾರ್ಥಿಗಳು ಆದರೆ ಅವರೆಲ್ಲ ಹತ್ತು ಕಿಲೋ ಮೀಟರ್ ನಷ್ಟು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಇಂದು ವೈದ್ಯರು ದಾದಿಯರು ಹಾಗೂ ಸಾರ್ವಜನಿಕರಿಗಾಗಿ ಆಕಾಶ್ ಮೆಡಿಕಲ್ ಆಸ್ಪತ್ರೆಯಿಂದ ಮ್ಯಾರಥಾನ್ ಸ್ಪರ್ದೆಯನ್ನು ಆಯೋಜಿಸಲಾಗಿತ್ತು.
ಮೂರು ವಿಭಾಗಗಳಾಗಿ ಹತ್ತು ಕಿಲೋ ಮೀಟರ್ ಐದು ಕಿಲೋಮೀಟರ್ ಮತ್ತು ಮೂರು ಕಿಲೋಮೀಟರ್ ವಿಭಾಗಗಳಾಗಿ ವಿಂಗಡಿಸಲಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ನಗದು ಬಹುಮಾನವನ್ನ ಆಕಾಶ್ ಆಸ್ಪತ್ರೆ ವತಿಯಿಂದ ವಿತರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಆಕಾಶ್ ಸಮೂಹ ಸಂಸ್ಥೆಗಳು ಸಂಸ್ಥಾಪಕರಾದ ಮುನಿರಾಜು ಮಾತಾನಾಡಿ ಸದಾ ಒತ್ತಡ ಜೀವನದಲ್ಲಿ ಕಾರ್ಯನಿರ್ವಹಿಸುವ ಎಲ್ಲರು ಇಂತಹ ಮ್ಯಾರಥಾನ್ ಗಳಲ್ಲಿ ಭಾಗವಹಿಸುವುದರಿಂದ ದೇಹ ಮನಸ್ಸು ಸದೃಡವಾಗಿರುತ್ತದೆ ಆದ್ದರಿಂದ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ ಎಂದರು.