ಬೆಂಗಳೂರು: ಅವರಿಬ್ಬರು ಒಂದೇ ಮನೆಯಲ್ಲಿ ಅಕ್ಕ ತಂಗಿಯನ್ನು ಮದುವೆಯಾಗಿ ಒಟ್ಟಿಗೆ ವಾಸವಾಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಮ್ಯೂಚುವಲ್ ಅಂಡರ್ ಸ್ಟಾಂಡಿಂಗ್ ಎನ್ನುವಂತೆ ಅಕ್ರಮ ಸಂಬಂಧ ಬೆಳೆದಿತ್ತು.. ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದವನಿಗೆ ಮುಹೂರ್ತವೂ ಫಿಕ್ಸ್ ಆಗಿತ್ತು.. ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿ ಅದೇ ಸ್ಟೈಲಲ್ಲಿ ಪೊಲೀಸರಿಗೆ ತಗಲಾಕಿಕೊಂಡ ಸ್ಟೋರಿ ತೋರಿಸ್ತೀವಿ ನೋಡಿ..
ಈ ಫೋಟೋದಲ್ಲಿ ಕಾಣ್ತಿರೋ ವ್ಯಕ್ತಿಯ ಹೆಸರು ಮಹಮದ್ ಅಖ್ತರ್ ಅಲಿ.. ವಯಸ್ಸು 49 ವರ್ಷ.. ಮೂಲತಃ ಪಶ್ಚಿಮ ಬಂಗಾಳದವನು.. ಚಿನ್ನಾಭರಣ ಬ್ಯುಸಿನೆಸ್ ಮಾಡುತ್ತಿದ್ದ ಈತ ಕಳೆದ 26 ವರ್ಷದಿಂದಲು ಕಬ್ಬನ್ ಪೇಟೆಯ ಜುಮ್ಮಮಸೀದಿ ಬಳಿ ವಾಸವಾಗಿದ್ದ. ಮಹಮದ್ ಅಖ್ತರ್ ಅಲಿ ಪತ್ನಿ ಮಕ್ಕಳು ಮತ್ತು ನಾದಿನಿ ಆಕೆಯ ಪತಿ ಶಹನವಾಜ್ ಎಲ್ಲರೂ ಒಟ್ಟಿಗೆ ವಾಸವಾಗಿದ್ದರು.
ಹೌದು, ಮಹಮದ್ ಅಖ್ತರ್ ಅಲಿ ಪತ್ನಿಯ ತಂಗಿ ಅಂದರೆ ನಾದನಿಯ ಮೇಲೆಯೇ ಕಣ್ಣಾಕಿದ್ದ.. ಪತ್ನಿ ಹೊರಗೆ ಹೋದಾಗ ನಾದಿನಿ ಜೊತೆ ಲವ್ವಿ ಡವ್ವಿ ಶುರು ಮಾಡ್ತಿದ್ನಂತೆ.. ಈ ವಿಚಾರ ಗಂಡ ಶಹನವಾಜ್ ಗೆ ಗೊತ್ತಾಗಿ ಜಗಳವೂ ಆಗಿತ್ತಂತೆ.. ಇದಾದ ಬಳಿಕ ಮಹಮದ್ ಅಖ್ತರ್ ಅಲಿ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗಲೇ ಇಲ್ಲ.
ಅಂದಹಾಗೆ ಮಹಮದ್ ಅಖ್ತರ್ ಖಾನ್ ನನ್ನು ಶಡ್ಕ ಅಂದ್ರೆ ಪತ್ನಿಯ ತಂಗಿ ಗಂಡ ಶಹನವಾಜ್ ಅಂಡ್ ಟೀಂ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೆ ಸಿನಿಮೀಯ ಶೈಲಿಯಲ್ಲಿ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ಆ ಬಳಿಕ ಶವವನ್ನು ಹೊಸಕೋಟೆ ಸಮೀಪದ ರಾಜಕಾಲುವೆ ಬಳಿ ಎಸೆದು ವಾಪಸ್ಸ್ ಬಂದಿದ್ದಾರೆ. ಈ ವೇಳೆ ಅಖ್ತರ್ ಖಾನ್ ಪತ್ನಿ ಹುಸೈನಾ ಬಿಬಿ ಹಲಸೂರುಗೇಟ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಲು ಬಂದಾಗ ಶಹನವಾಜ್ ಸಹ ಜೊತೆಯಲ್ಲೇ ಬಂದು ಅಮಾಯಕನಂತೆ ಫೋಸ್ ನೀಡಿದ್ದಾನೆ. ಆದರೆ ಮೃತನ ಮೊಬೈಲ್ ಶಹನವಾಜ್ ಕಾರಿನಲ್ಲೇ ರಿಂಗಣಿಸುತ್ತಿರುತ್ತೆ ಜೊತೆಗೆ ಕಾರಿನಲ್ಲಿದ್ದ ರಕ್ತದ ಕಲೆ ಸಾವಿನ ಸುಳಿವು ನೀಡುತ್ತೆ.
ಸದ್ಯ ಹಲಸೂರು ಗೇಟ್ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದು ಕೊಲೆಯ ವಿಚಾರ ಬಹಿರಂಗವಾಗಿದೆ. ಆರೋಪಿ ಶಹನವಾಜ್ ವಶಕ್ಕೆ ಪಡೆದಿರೋ ಪೊಲೀಸರು ಹೆಚ್ಚಿನ ತನಿಖೆ ನೆಡೆಸುತ್ತಿದ್ದಾರೆ. ಅದೇನಾದ್ರು ಅಕ್ರಮ ಸಂಬಂಧ ಅಕ್ಕತಂಗಿಯರ ಬಾಳಿಗೆ ಮುಳ್ಳಾದ್ರೆ ಶಡ್ಕರ ಬಾಳಲ್ಲಿ ಒಬ್ಬ ಕೊಲೆಯಾಗಿ ಮತ್ತೊಬ್ಬ ಜೈಲು ಸೇರಿದ್ದಾನೆ.