ಬಾಲಿವುಡ್ ನ ಖ್ಯಾತ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ಫಹಾದ್ ಅವರನ್ನು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಮದುವೆಯಾದ ಮೂರುವರೆ ತಿಂಗಳಿಗೆ ತಾವು ನಾಲ್ಕು ತಿಂಗಳ ಗರ್ಭಿಣಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದಕ್ಕಾಗಿ ನಟಿ ಸಖತ್ ಟ್ರೋಲ್ ಆಗುತ್ತಿದ್ದಾರೆ.
ತಾವು ತಾಯಿ ಆಗುತ್ತಿರುವ ವಿಷಯವನ್ನು ಸ್ವತಃ ಸ್ವರಾ ಭಾಸ್ಕರ್ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ, ‘ನಿಮ್ಮೆಲ್ಲ ಪ್ರಾರ್ಥನೆಗಳು ಒಟ್ಟಿಗೆ ನೆರವೇರುತ್ತವೆ. ವಿಶ್ ಮಾಡಿ. ಅಕ್ಟೋಬರ್ ಬೇಬಿ’ ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ ಅಕ್ಟೋಬರ್ ನಲ್ಲಿ ಕಂದನನ್ನು ಮನೆ ತುಂಬಿಸಿಕೊಳ್ಳಲು ಸ್ವರಾ ಭಾಸ್ಕರ್ ರೆಡಿಯಾಗಿದ್ದಾರೆ.
ಸ್ವರಾ ಭಾಸ್ಕರ್ ಇತ್ತೀಚಿಗೆ ಪೊಲಿಟಿಕಲ್ ಲೀಡರ್ ಫಹಾದ್ ಅಹ್ಮದ್ ಅವರನ್ನ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಬಹುಕಾಲದ ಗೆಳೆಯನ ಜೊತೆ ಸ್ವರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ತಮ್ಮ ಮೊದಲ ರಾತ್ರಿಯ ಬೆಡ್ರೂಮ್ ಫೋಟೋವನ್ನ ನಟಿ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು.
ಸಮಾಜವಾದಿ ಪಕ್ಷದ ಯುವ ಅಧ್ಯಕ್ಷ ಫಹಾದ್ ಜೊತೆ ಸ್ವರಾ ವಿಶೇಷ ಕಾಯ್ದೆಯಡಿ ಜ.6ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಇತ್ತೀಚಿಗೆ ತಮ್ಮ ಮದುವೆಯ ಬಗ್ಗೆ ಸ್ವರಾ ಅಧಿಕೃತವಾಗಿ ತಿಳಿಸಿದ್ದರು. ಅಣ್ಣ ಎಂದು ಕರೆದು ಈಗ ಅವರನ್ನೇ ಮದುವೆಯಾಗಿದ್ದೀರಾ ಎಂದು ಟ್ರೋಲ್ ಮಾಡಲಾಯ್ತು. ಹೀಗೆ ಸಾಕಷ್ಟು ಟೀಕೆಗಳ ನಡುವೆ ಈ ನವಜೋಡಿ ದಾಂಪತ್ಯ ಜೀವನವನ್ನು ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾರೆ.