ನಟ ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್ ಇತ್ತೀಚೆಗೆ ಬಹುಕಾಲದ ಗೆಳೆಯ ಶಾಂತನು ಜೊತೆಗಿನ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ. ತಮ್ಮ ಖಾಸಗಿ ಬದುಕಿನ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾದ ಬೆನ್ನಲ್ಲೇ ಇದೀಗ ನಟಿ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ತನಗೆ ಪಿಸಿಓಎಸ್ ಸಮಸ್ಯೆ ಇದೆ ವಿಷಯವನ್ನು ನಟಿ ತಿಳಿಸಿದ್ದಾರೆ. ಮೊದಲ ಪಿರಿಯಡ್ ಆದಾಗಲೇ ದೊಡ್ಡ ಹೆಣಗಾಟವಾಗಿತ್ತು. ಈಗಲೂ ಆ ನೋವನ್ನು ಭರಿಸುತ್ತಿದ್ದೇನೆ ಎಂದಿದ್ದಾರೆ. ಈ ಪಿರಿಯಡ್ ಸಮಯದಲ್ಲಿ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲಾಗುವುದಿಲ್ಲ. ಇದರಿಂದಾಗಿ ನಾನು ಸಾಕಷ್ಟು ದೊಡ್ಡ ದೊಡ್ಡ ಆಫರ್ಗಳನ್ನು ಕಳೆದುಕೊಂಡಿದ್ದೇನೆ. ಆದರೆ ಕೆಲವು ನಿರ್ಮಾಪಕರು ಕೋಟಿಗಟ್ಟಲೆ ಖರ್ಚು ಮಾಡಿ ಶೂಟಿಂಗ್ ಮಾಡುತ್ತಿರುವಾಗ ನಿಮ್ಮ ಆರೋಗ್ಯ ಸಮಸ್ಯೆಯಿಂದ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಮಹಿಳೆಯರಲ್ಲಿ ಪಿರಿಯಡ್ ವೇಳೆ ಭಾರೀ ರಕ್ತಸ್ರಾವವನ್ನು ಉಂಟುಮಾಡುತ್ತದೆ. ಅಲ್ಲದೇ ಈ ಕಾಯಿಲೆ ಇರುವವರಲ್ಲಿ ಅನೇಕರಿಗೆ ಮಕ್ಕಳೂ ಸಹ ಆಗುವುದಿಲ್ಲ ಎಂದು ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.