ಬೆಂಗಳೂರು:- 14ಗಂಟೆ ಕೆಲಸಕ್ಕೆ ಐಟಿ ಉದ್ಯೋಗಿಗಳು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದು, ಕೆಲಸದ ಅವಧಿ ಹೆಚ್ಚಳದ ಪ್ರಸ್ತಾವನೆ ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಅಲ್ಲದೇ ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಪ್ರಸ್ತಾವನೆ ಸಂಪೂರ್ಣ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಕೆಲಸದ ಅವಧಿ ಹೆಚ್ಚಿಸಿದ್ರೆ ಐಟಿ ಉದ್ಯೋಗಿಗಳ ಆರೋಗ್ಯ ಹದಗೆಡುತ್ತೆ. ದಿನದ 14ಗಂಟೆ ಕೆಲಸವನ್ನ ಮಾಡಲು ಸಾಧ್ಯವಿಲ್ಲ.
ಈಗಿರುವ ಕೆಲಸದ ಅವಧಿಯಿಂದಲೇ ಐಟಿ ಉದ್ಯೋಗಿಗಳು ಡಿಪ್ರೆಶನ್ ಹೋಗ್ತಿದ್ದಾರೆ. ಇದೀಗಾ ಮತ್ತೆ ಕೆಲಸ ಅವಧಿ ಹೆಚ್ಚಳ ಮಾಡಿದರೇ ಮತ್ತಷ್ಟು ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಕೆಲಸದ ಸಮಯ ಹೆಚ್ಚಳದ ಪ್ರಸ್ತಾವನೆ ಕೈ ಬಿಡಬೇಕೆಂದು ಐಟಿ ಉದ್ಯೋಗಿಗಳು ಆಗ್ರಹಿಸಿದ್ದಾರೆ.