ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಮೌರ್ಯ ಸಿನಿಮಾದಲ್ಲಿ ನಟಿಸಿದ್ದ ನಟಿ ಮೀರಾ ಜಾಸ್ಮಿನ್ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.
ವೈಯಕ್ತಿಯ ಜೀವನದ ಏರುಪೇರಿನಿಂದ ನೊಂದಿರುವ ನಟಿ ಮತ್ತೆ ನಟನೆಗೆ ಮರಳಲು ನಿರ್ಧರಿಸಿದ್ದು ಅದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೀರಾ ಜಾಸ್ಮಿನ್ ತಮ್ಮ ಹೋಮ್ಲಿ ಲುಕ್ ನಲ್ಲೇ ಅಭಿಮಾನಿಗಳ ಮನ ಗೆದ್ದಿದ್ದರು. ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸಖತ್ ಗ್ಲಾಮರಸ್ ಆಗಿ ಮಿಂಚಲು ರೆಡಿಯಾಗಿದ್ದಾರೆ.
ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವಿರುವ ನಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ತಮ್ಮ ಹೊಸ ಹೊಸ ಫೋಟೋ ಶೂಟ್ ಗಳನ್ನು ನಟಿ ಶೇರ್ ಮಾಡುತ್ತಿರುತ್ತಾರೆ.
ಒಂದು ಕಾಲದಲ್ಲಿ ಚಬ್ಬಿಯಾಗಿದ್ದ ನಟಿ ಇದೀಗ ಸಖತ್ ಸ್ಲಿಮ್ ಆಗಿದ್ದಾರೆ. ಹಿಂದೆಂದೂ ಕಾಣದಷ್ಟು ಬ್ಯೂಟಿಫುಲ್ ಆಗಿದ್ದು ನಟಿಯ ಲೇಟೆಸ್ಟ್ ಫೋಟೋಗಳು ವೈರಲ್ ಆಗಿದೆ.
ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಮೌರ್ಯ ಹಾಗೂ ಅರಸು ಸಿನಿಮಾದಲ್ಲಿ ಮೀರಾ ಜಾಸ್ಮಿನ್ ಕಾಣಿಸಿಕೊಂಡಿದ್ರು. 41ರ ಹರೆಯಲ್ಲೂ ಮೀರಾ ಸಖತ್ ಸ್ವೀಟ್ ಆಗಿ ಕಾಣಿಸಿಕೊಂಡಿದ್ದಾರೆ.
ತೆಲುಗು ಅಲ್ಲದೆ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಮಿಂಚುತ್ತಿದ್ದ ಮೀರಾ ಜಾಸ್ಮಿನ್ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ.
ಮದುವೆಯಾದ್ರು. ಬಳಿಕ ಚಲನಚಿತ್ರಗಳಿಂದ ದೂರ ಉಳಿದಿದ್ದರು. 2014 ರಲ್ಲಿ ಮೀರಾ ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುವ ಅನಿಲ್ ಜಾನ್ ಟೈಟಸ್ ಅವರನ್ನು ವಿವಾಹವಾದರು. ಆದರೆ ಎರಡೇ ವರ್ಷದಲ್ಲಿ ಗಂಡನಿಂದ ದೂರವಾದರು.