ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡೇ ದಿನ ಬಾಕಿ ಉಳಿದಿದೆ.ಚುನಾವಣಾ ಎದುರಿಸಲು ಚುನಾವಣಾಧಿಕಾರಿಗಳು ಸಜ್ಜಾಗಿದ್ದು, ಅರ್ಧದಷ್ಟು ಬಸ್ಗಳನ್ನು ನಿಯೋಜನೆ ಮಾಡಲಾಗಿದೆ.ಇದರಿಂದ ಮಂಗಳವಾರ- ಬುಧವಾರ ಬಿಎಂಟಿಸಿ,ಕೆಎಸ್ಆರ್ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ.ನಾಡಿದ್ದು ಬೆಳಗ್ಗೆಯಿಂದ ಬಸ್ ಗಾಗಿ ಪರದಾಡಬೇಕಾದ ಅನಿವಾರ್ಯತೆ ಎದುರಾಗಿದೆ..
ರಾಜ್ಯ ವಿಧಾನಸಭೆ ಚುನಾವನೆಗೆ ಕ್ಷಣಗಣನೆ ಆರಂಭವಾಗಿದೆ.ಚುನಾವಣೆ ಕಾರ್ಯಕ್ಕೆ ಹೆಚ್ಚುವರಿ ಬಸ್ ನಿಯೋಜನೆ ಮಾಡಿರೋದರಿಂದ ಬಸ್ ಸಂಚಾರಲ್ಲಿ ವ್ಯತ್ಯಯ ವಾಗಲಿದೆ.ಚುನಾವಣೆಗೆ ಶೇ. 70ರಷ್ಟು ಬಸ್ಗಳು ಚುನಾವಣೆ ಆಯೋಗದಿಂದ ಬೇಡಿಕೆ ಬಂದಿತ್ತು. ಆದರೆ ಮತದಾನ ನಡೆಯಲಿರುವ ಕಾರಣ ತಮ್ಮ ಅಗತ್ಯ ಪರಿಗಣಿಸಿ ಶೇ. 50 ರಷ್ಟು ಬಸ್ ನೀಡಲು ಕೆಎಸ್ಆ ರ್ಟಿಸಿ, ಬಿಎಂಟಿಸಿ ಸಮ್ಮತಿಸಿದೆ.ಬುಧವಾರ ಮತದಾನ ನಡೆಯುವ ಕಾರಣ ನಾನಾ ಊರುಗಳಿಗೆ ತೆರಳುವವರು ಸಾಕಷ್ಟು ಮಂದಿ ಇರುತ್ತಾರೆ. ಅದಾಗಲೇ ಮುಂಗಡ ಪಾವತಿ ಫುಲ್ ಆಗಿದ್ದು, ಹೆಚ್ಚುವರಿ ಬಸ್ಗಾಳ ಅಗತ್ಯ ಎದುರಾಗಲಿದೆ…
ಕೆಸ್ಆಟರ್ಟಿಸಿ ಸದ್ಯ 8 ಸಾವಿರ ಬಸ್ಗ್ಳನ್ನು ಹೊಂದಿದೆ. ಇದರಲ್ಲಿ 4 ಸಾವಿರ ಕೆಸ್ಆಲರ್ಟಿಸಿ ಬಸ್ಗಳು ಚುನಾವಣಾ ಸೇವೆಗೆ ನೀಡಲಾಗಿದೆ. ಬಿಎಂಟಿಸಿ ಯಲ್ಲಿ 6500 ಬಸ್ ಗಳು ಹೊಂದಿದ್ದು, 1500 ಬಸ್ ಗಳನ್ನ ನಿಯೋಜನೆ ಮಾಡಲಾಗಿದೆ.ಇದರಿಂದ ಮಂಗಳವಾರ, ಬುಧವಾರ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೇ 10 ರಂದು ಮತದಾನ ನಡೆಯುವುದರಿಂದ 9 ರ ಸಂಜೆಯೊಳಗೆ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ನಿಗದಿತ ಮತಗಟ್ಟೆಗಳಿಗೆ ತೆರಳುತ್ತಾರೆ.
ಅವರೆಲ್ಲರ ಸಂಚಾರಕ್ಕೆ ಬಸ್ಗಳನ್ನು ನೀಡಲಾಗಿದೆ. ಹೀಗಾಗಿ ಬಿಎಂಟಿಸಿ ,ಕೆಸ್ಆೆರ್ಟಿಸಿಯಲ್ಲಿ ಉಳಿದ ಬಸ್ಗಳು ಮಾತ್ರ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ. ಇದರಿಂದ ರಾಜ್ಯದ ವಿವಿಧೆಡೆ ತೆರಳುವ ಪ್ರಯಾಣಿಕರಿಗೆ ಕೊಂಚ ಅಡಚಣೆಯಾಗಲಿದೆ. ಬೆಂಗಳೂರು ಮಹಾನಗರದಲ್ಲೂ ಮತದಾನ ಮುನ್ನಾ ದಿನ ಮತ್ತು ಮತದಾನದ ದಿನ ಸಾರ್ವಜನಿಕ ಬಸ್ ಸೇವೆಯಲ್ಲಿ ವ್ಯತ್ಯಯವಾಗಲಿದೆ., ಇದರಿಂದ ಪ್ರಯಾಣಿಕರಿಗೆ ಸಂಕಷ್ಟು ಎದುರಾಗಿದೆ..ಆದ್ರೆ ಜನ ಸಹಕರಿಸುವಂತೆ ಬಿಎಂಟಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ತಲಾ ಬಸ್ಗೆಿ ದಿನಕ್ಕೆ 11 ಸಾವಿರ ರೂ. ಬಾಡಿಗೆ ನೀಡಲಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಮಾತ್ರವಲ್ಲ ಇತರೆ ಸಾರಿಗೆ ನಿಗಮಗಳ ಬಸ್ ಗಳನ್ನ ಬಳಕೆ ಆಗಲಿದೆ. ಇದರಿಂದ ದೊಡ್ಡ ಮೊತ್ತದ ಆದಾಯ ನಿಗಮಗಳಿಗೆ ಬರುವ ನಿರೀಕ್ಷೆಯಿದೆ,.ವಿಶೇಷ ಸೇವೆಗೆ ಬಸ್ ನೀಡಬೇಕಾಗಿರೋದೆರಿಂದ ಸಾರ್ವಜನಿಕರು ಸಹಕರಿಸಬೇಕು ಅಂತ ಸಾರಿಗೆ ನಿಗಮಗಳು ಮನವಿ ಮಾಡಿವೆ.. ಒಟ್ಟಿನಲ್ಲಿ ಮೇ 10 ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯುತ್ತಿರೋ ಹಿನ್ನಲೆಯಲ್ಲಿ ಸರ್ಕಾರಿ ಬಸ್ ಳಿಗೆ ಕೊರತೆ ಎದುರಾಗಲಿದೆ. ಹೆಚ್ಚುವರಿ ಬಸ್ ಗಳನ್ನ ನಿಗಮಗಳು ಆಯೋಜನೆ ಮಾಡಿರೋ ಕಾರಣ ಎರಡು ದಿನ ಪ್ರಯಾಣಿಕರಿಗೆ ಸಮಸ್ಯೆ ಕಾಡಲಿದೆ.