ಮೈಸೂರು: ಕರಕುಶಲ ನಗರದ ಸಮೀಪ ಮಳೆ ನೀರು ಚರಂಡಿಗಳನ್ನು ಸ್ವಚ್ಚಗೊಳಿಸುವ ಕಾಮಗಾರಿಯನ್ನು ಮೇಯರ್ ಶಿವಕುಮಾರ್ ಪರಿಶೀಲಿಸಿದರು. ಬೆಂಗಳೂರಿನಲ್ಲಿ ಸಂಭವಿಸಿದ ಮಳೆ ಅನಾಹುತ ಮೈಸೂರಿನಲ್ಲಿ ಅಗಬಾರದು ಎಂಬ ಕಾರಣಕ್ಕೆ ಮುಂಗಾರು ಮಳೆ ಆರಂಭಕ್ಕೆ ನಗರದಲ್ಲಿರುವ ಎಲ್ಲಾ ಮಳೆ ನೀರು ಚರಂಡಿಗಳನ್ನು ಪಾಲಿಕೆಯ ಯಂತ್ರೋಪಕರಣ ಬಳಸಿಯೇ,
ಸ್ವಚ್ಚತೆ ಮಾಡುವ ಕಾಮಗಾರಿ ಆರಂಭಿಸಲಾಗಿದೆ. ನಗರದ 65 ವಾರ್ಡ್ ಗಳಿಗೂ ತಲಾ ಒಂದು ಲಕ್ಷ ರೂ. ಬಿಡುಗಡೆ ಮಾಡಿದ್ಷು, ಸಣ್ಣ ಸಣ್ಣ ಚರಂಡಿಗಳನ್ನು ಸ್ವಚ್ಚತೆ ಮಾಡುವ ಮೂಲಕ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುವುದು ಎಂದು ಮೇಯರ್ ಶಿವಕುಮಾರ್ ಹೇಳಿದರು.