ದೇಶದ ದೊಡ್ಡದೊಡ್ಡ ಸಂಸ್ಥೆಗಳಾದ ಐಐಟಿ, ಐಐಎಂಗಳಿಂದ ಪ್ಲೇಸ್ಮೆಂಟ್ ಪಡೆಯುವ ವಿದ್ಯಾರ್ಥಿಗಳು ಮಾತ್ರ ಲಕ್ಷಗಟ್ಟಲೇ ಪ್ಯಾಕೇಜ್ ಪಡೆಯುತ್ತಾರೆ ಎಂಬ ಮಾತಿದೆ. ಆದರೆ ಪಂಜಾಬ್ನ ವಿವಿ ವಿದ್ಯಾರ್ಥಿಯೊಬ್ಬರು, ಅದನ್ನು ಸುಳ್ಳು ಮಾಡಿದ್ದಾರೆ.
ಪಂಜಾಬ್ ವಿವಿಯಲ್ಲಿ ಎಂಬಿಎ ಪದವಿ ಪಡೆದ 25 ವರ್ಷದ ವಿದ್ಯಾರ್ಥಿನಿ ಅಂಶು ಸೂದ್, ಕ್ಯಾಪಸ್ ಸೆಲೆಕ್ಷನ್ನಲ್ಲಿ ಸೆಲೆಕ್ಟ್ ಆಗಿ ಭರ್ಜರಿ ಬಂಪರ್ ಸಂಬಳ ಪಡೆಯುತ್ತಿದ್ದಾರೆ. ಕ್ಯಾಂಪಸ್ ಸೆಲೆಕ್ಷನ್ ಮೂಲಕ ಸೆಲೆಕ್ಟ್ ಆಗಿದ್ದ ಈಕೆ, ಇಂದು 58.48 ಲಕ್ಷ ರೂಪಾಯಿ ಪ್ಯಾಕೇಜ್ ಪಡೆಯುತ್ತಿದ್ದಾರೆ. 2022ರಲ್ಲಿ ಇವರು ಕ್ಯಾಂಪಸ್ ಸೆಲೆಕ್ಷನ್ ಆಗಿದ್ದರು.