ಬೆಂಗಳೂರು ;- ಫ್ರೀ ಬಸ್ ನಿಂದ ಟ್ರಿಪ್ ಗೆ ಹೋದ ನನ್ನ ಪತ್ನಿ ಇನ್ನೂ ಬಂದಿಲ್ಲ ಎಂದು ಕುಡುಕ ಪತಿಯೊಬ್ಬ ಸರ್ಕಾರಿ ಬಸ್ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಶಕ್ತಿಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆ ಮಹಿಳೆಯರು ಪುಣ್ಯಕ್ಷೇತ್ರ ಹಾಗೂ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಹೀಗೆ ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ ಎಂದು ಮಧ್ಯಪ್ರಿಯ ಪತಿರಾಯ ಅವಾಂತರ ಸೃಷ್ಠಿಸಿದ್ದಾನೆ. ನನ್ನ ಹೆಂಡತಿ ಪ್ರವಾಸಕ್ಕೆ ಹೋದವಳು ಇನ್ನು ವಾಪಸ್ ಬಂದಿಲ್ಲವೆಂದು ಸರ್ಕಾರಿ ಬಸ್ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಹೊಸಕೋಟೆ ಬಸ್ ನಿಲ್ದಾಣದಲ್ಲಿ ಕುಡಕ ಪತಿರಾಯ ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನು ಬಂದಿಲ್ಲವೆಂದು ಬಿಎಂಟಿಸಿ ಬಸ್ ಟೈರ್ ಕೆಳಗಡೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಅರ್ದಗಂಟೆಗೂ ಹೆಚ್ಚು ಕಾಲ ಕಿರಿಕ್ ಮಾಡಿದ್ದಾನೆ. ಈತನ ಅವಾಂತರದಿಂದ ಬಸ್ನಲ್ಲಿ ಕುಳಿತ ಪ್ರಯಾಣಿಕರ ಪರದಾಡುವಂತಾಯಿತು.
ಸಿದ್ದರಾಮಯ್ಯ ಸರಿಯಿಲ್ಲ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ. ಉಚಿತ ಬಸ್ ಪ್ರಯಾಣವನ್ನು ತೆಗೆದು ಹಾಕಬೇಕು ಎಂದು ಅಂತ ಪತಿರಾಯ ವಾಗ್ದಾಳಿ ಮಾಡಿದನು. ಕೊನೆಗೆ ಸ್ಥಳೀಯರು ಈತನನ್ನು ಬಸ್ ಕೆಳಗಡೆಯಿಂದ ಹೊರಗೆ ಎಳೆದರು. ನಂತರ ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದರು.