ಬೆಂಗಳೂರು: ಆಧುನಿಕ ತಂತ್ರಜ್ಞಾನದಿಂದ ಯಾವುದೇ ಕಠಿಣವಾದ ಖಾಯಿಲೆಗಾದ್ರೂ ಚಿಕಿತ್ಸೆ ಇದೆ ಅನ್ನುವುದನ್ನು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆ ಯಶಸ್ವಿಯಾಗಿ ಪ್ರೂವ್ ಮಾಡಿದೆ. ಆರೋಗ್ಯ ಸೇವೆಯಲ್ಲಿ ನವೀನ ಆವಿಷ್ಕಾರಗಳ ಸಹಾಯದಿಂದ ನಿಖರವಾದ ರೋಗನಿರ್ಣಯವನ್ನು ಕೈಗೊಂಡು ಸೂಕ್ತವಾದ ಚಿಕಿತ್ಸೆಯನ್ನು ನೀಡಿ ರೋಗಿಗಳನ್ನು ಗುಣಪಡಿಸಬಹುದು. ಇಂತಹ ವಿಶೇಷವಾದ ಒಂದು ಕೇಸ್ ಬೆಂಗಳೂರಿನ ವೈಟ್ಫೀಲ್ದ್ ನಲ್ಲಿರುವ ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದಿದೆ.
33 ವರ್ಷದ ಗೃಹಿಣಿಯು ಧೀರ್ಘ ಕಾಲದ, ಕೆಮ್ಮು, ಉಸಿರಾಟಕ್ಕೆ ತೊಂದರೆ, ಶ್ವಾಸಕೋಶದ ಸಮಸ್ಯೆಗಳು ಮತ್ತು ದುರ್ಬಲತೆಯಿಂದ ಸುಮಾರು ಏಳು ವಾರಗಳಿಗೂ ಹೆಚ್ಚು ಕಾಲ ನರಳುತ್ತಾ ಇದ್ದರು. ಇದಕ್ಕಾಗಿ ತಮ್ಮ ನಿವಾಸದ ಬಳೀ ಇದ್ದ ವೈದ್ಯರ ಬಳಿ ಪ್ರಾಥಮಿಕ ಪರೀಕ್ಷೆ ಮಾಡಿಸಿದಾಗ, ಕುತ್ತಿಗೆಯಲ್ಲಿನ 8.2 x 7.5 x 5.4 ಸೆಂಮೀ ಗಾತ್ರದ ಸಿಸ್ಟ್ cyst) ಕಂಡುಬಂದಿದ್ದು, ಹೆಚ್ಚಿನ ಪರೀಕ್ಷೆಗಳ ನಂತರ, ಅದು ಥೈರಾಯ್ಡ್ ಸಿಸ್ಟ್ ಎಂದು ನಿರ್ಧರಿಸಲಾಗಿತ್ತು. ಇದು ಕುತ್ತಿಗೆಯಿಂದ ಎದೆಗೂಡಿನ ಒಳಗೆ ಹರಡಿದ್ದರಿಂದ, ಮಹಿಳೆಗೆ ಮೆಡಿಕವರ್ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಡಿಯೋ ಥೋರಾಸಿಕ್ ಸರ್ಜನ್ ( Cardiothoracic Surgeon) ಅವರಿಂದ ಚಿಕಿತ್ಸೆ ಪಡೆಯುವಂತೆ ಸ್ಥಳೀಯ ವೈದ್ಯರು ಸೂಚನೆ ನೀಡಿದ್ದರು.
ಮೆಡಿಕವರ್ ಆಸ್ಪತ್ರೆಯ ಕಾರ್ಡಿಯೋಥೋರೆಸಿಕ್ ಸರ್ಜನ್ ಡಾ. ರಾಘವೇಂದ್ರ ಚಿಕ್ಕಾತೂರ್ ಅವರನ್ನು ರೋಗಿ ಮತ್ತು ಸಂಬಧಿಕರು ಆಪರೇಷನ್ ಗೆ ಎಂದು ಭೇಟಿ ಮಾಡಿದರು. ಈ ಗಂಟಿನ ಮೂಲದ ಬಗ್ಗೆ ಅನುಮಾನವಿದ್ದರಿಂದ ಮೆಡಿಕವರ್ ಆಸ್ಪತ್ರೆಯಲ್ಲಿ ರೇಡಿಯಾಲಜಿ ವಿಭಾಗದ ಮುಖ್ಯಸ್ಥರಾದ Dr ಚಾಯನಿಕಾ ಅಗರ್ವಾಲ್ ಅವರಿಂದ CT / MRI ಸ್ಕ್ಯಾನ್ ಗಳನ್ನು ಪುನರ್ ವಿಮರ್ಶೆ ಮಾಡಿಸಿದ ಬಳಿಕ, ಮಹಿಳೆಗೆ ಥೈರಾಯ್ದ್ ಗ್ರಂಥಿಯಿಂದ ಬಂದಿದ್ದಲ್ಲ, ಬದಲಾಗಿ ಬ್ರೋನ್ಕೋಜೆನಿಕ್ ಸಿಸ್ಟ್ ನಿಂದ (Bronchogenic Cyst) ನರಳುತ್ತಾ ಇದ್ದಾರೆ ಎಂದು ತಿಳಿಸಿದ್ದಾರೆ.
ಇವು ಶ್ವಾಸನಾಳಗಳಿಂದ ಹುಟ್ಟುವುದರಿಂದ ಶ್ವಾಸಕೋಶದ ಮೇಲೆ ಒತ್ತಡ ಉಂಟಾಗಿ, ಕೆಮ್ಮು, ಉಸಿರಾಟಕ್ಕೆ ತೊಂದರೆ ಇಂತಹ ರೋಗ ಲಕ್ಷಣಗಳು ಕಂಡು ಬರುತ್ತವೆ. ಈ ತರಹದ ಸಿಸ್ಟ್ಗಳು ಸಾಮಾನ್ಯವಾಗಿ ಹೃದಯಕ್ಕೆ ಹತ್ತಿರವಿದ್ದು ಶ್ವಾಸನಾಳ ದೇಹದ ಮುಖ್ಯ ರಕ್ತನಾಳಗಳ ಮೇಲೆ ಒತ್ತಡವನ್ನುಂಟು ಮಾಡುತ್ತವೆ. ಬಳಿಕ ಮೆಡಿಕವರ್ ಆಸ್ಪತ್ರೆಯ ಕಾರ್ಡಿಯೋಥೋರಾಸಿಕ್ ತಂಡವು ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯನ್ನು ರೋಗಿಗೆ ತಿಳಿಸಿಕೊಟ್ಟಿದ್ದಾರೆ .
ಎದೆಗೂಡಿನಿಂದ (ಸುಪೀರಿಯರ್ ಮೀಡಿಯಾಸ್ಟಿನಂನಿಂದ) ಕುತ್ತಿಗೆಗೆ ಹರಡಿರುವುದರಿಂದ ಈ ಸಿಸ್ಟನ್ನು ಎದೆಗೂಡಿನ ಮುಖಾಂತರ ಆಪರೇಷನ್ ಮಾಡುವ ಸಮಯದಲ್ಲಿ, ಈ ಸಿಸ್ಟ್ ಇನ್ನೊಮಿನೇಟ್ ಆರ್ಟರಿ (Innominate Artery) ಮತ್ತು ಇನ್ನೊಮಿನೇಟ್ ವೇಯ್ನ್ ಗಳಿಗೆ (Innominate Vein) ಅಂಟಿಕೊಂಡಿದ್ದು , ಟ್ರೇಕಿಯವನ್ನು (Trachea – ದೇಹದ ದೊಡ್ಡ ಹಾಗೂ ಮುಖ್ಯವಾದ ಶ್ವಾಸನಾಳ) ಎಡಕ್ಕೆ ತಳ್ಳಿದ್ದು ಕಂಡು ಬಂದಿದೆ. ಆದರೂ ಯಾವುದೇ ಸಮಸ್ಯೆ ಇಲ್ಲದೇ ಎಚ್ಚರಿಕೆಯಿಂದ ಸಿಸ್ಟ್ ಅನ್ನು ಸ್ವಲ್ಪನೂ ಬ್ರೇಕ್ ಮಾಡದೇ ಜೋಪಾನವಾಗಿ ಹೊರತೆಗೆಯುವಲ್ಲಿ ಡಾ. ರಾಘವೇಂದ್ರ ಚಿಕ್ಕಾತೂರ್ ಯಶಸ್ವಿಯಾಗಿದ್ದಾರೆ. ಅಪರೇಷನ್ ನಡೆದು ಒಂದು ವಾರಕ್ಕೆ, ಯಾವುದೇ ಸಮಸ್ಯೆ ಇಲ್ಲದೇ ಎಂದಿನಂತೆ ತಮ್ಮ ದೈನಂದಿನ ಜೀವನ ನಡೆಸಲು ಅನುಕೂಲವಾಗಿದೆ. ಇಂತಹ ಸಮಸ್ಯೆಗಳಿಗೆ ಸರಿಯಾದ ರೇಡಿಯೋಲಾಜಿಕಲ್ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸೆ ಮೂಲಕ ರೋಗಿಗೆ ಇರೋ ನಿಜವಾದ ಸಮಸ್ಯೆಯನ್ನುತಿಳಿದು ಬಳಿಕ ಅದಕ್ಕೆ ಸೂಕ್ತ ಪರಿಹಾರ ಹುಡುಕಲು ಅನುಕೂಲವಾಗುತ್ತದೆ ಎಂದು ಮೆಡಿಕವರ್ ಆಸ್ಪತ್ರೆಯ ಕಾರ್ಡಿಯೋಥೋರಾಸಿಕ್ ಸರ್ಜನ್ ಡಾ. ರಾಘವೇಂದ್ರ ಚಿಕ್ಕಾತೂರ್ ಅಭಿಪ್ರಾಯ ಪಟ್ಟಿದ್ದಾರೆ .