ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ 100 ದಿನಗಳ ಬಳಿಕ ಕೊನೆಗೂ ಬೇಲ್ ಗೆ ಅರ್ಜಿ ಸಲ್ಲಿಸಿದ್ದಾರೆ. 57ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಸೋಮವಾರ ವಿಚಾರಣೆ ನಡೆಯಲಿದೆ. ಈ ಮಧ್ಯೆ ಮೀನಾ ತೂಗುದೀಪರವರು ಬಳ್ಳಾರಿ ಜೈಲಿಗೆ ಕರೆ ಮಾಡಿ ಮಗನೊಂದಿಗೆ ಮಾತಾಡಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ಗೆ ದೂರವಾಣಿ ಕರೆ ಮಾಡುವ ಮೂಲಕ ಮೀನಾ ತೂಗುದೀಪ ಧೈರ್ಯ ತುಂಬಿದ್ದಾರೆ. ಯಾವುದೇ ಆತಂಕ ಬೇಡ ರಾಜರಾಜೇಶ್ವರಿ ಆಶೀರ್ವಾದ ಇದೆ ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ಬಳಿ ಸ್ಟ್ರಾಂಗ್ ವಕೀಲರಿದ್ದಾರೆ ಬೇಲ್ ಸಿಗುತ್ತೆ ಅಂತಾ ದರ್ಶನ್ಗೆ ದೈರ್ಯ ತುಂಬಿದ್ದಾರೆ.
ಪ್ರಿಸನ್ ಕಾಲ್ ಸಿಸ್ಟಮ್ ಅಡಿಯಲ್ಲಿ 5 ನಿಮಿಗಳ ಕಾಲ ದರ್ಶನ್ ತಾಯಿಯೊಂದಿಗೆ ಮಾತನಾಡಿದ್ದಾರೆ. ಕೆಟ್ಟ ಘಳಿಗೆಯಿಂದ ಘಟನೆ ನಡೆದು ಹೋಗಿದೆ ಧೈರ್ಯವಾಗಿರು ಎಂದು ಮೀನ ತೂಗುದೀಪ ಹೇಳಿದ್ದಾರೆ. ಬಳಿಕ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ತಾಯಿಯೊಂದಿಗೆ ದರ್ಶನ್ ಭಾವುಕನಾಗಿ ಮಾತನಾಡಿದ್ದಾರೆ.
ಬೇಲ್ ಅರ್ಜಿ ಸಲ್ಲಿಕೆ ಬಳಿಕ ತಾಯಿ ಜೊತೆಗೆ ಮಾತುಕತೆ ಮಾಡಿದ್ದಾರೆ. ಈ ವೇಳೆ ಮತ್ತೊಮ್ಮೆ ಬಳ್ಳಾರಿಗೆ ಬರುವುದಾಗಿ ದರ್ಶನ್ ಗೆ ತಿಳಿಸಿದ್ದಾರೆ. ರಾಜರಾಜೇಶ್ವರಿ, ಚಾಮುಂಡೇಶ್ವರಿ ಹೆಸರಲ್ಲಿ ಮೀನಾ ತೂಗುದೀಪ ದರ್ಶನ್ಗೆ ಧೈರ್ಯ ತುಂಬಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ.