ಸೂತ್ರಧಾರಂ ಸಿನಿಮಾದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಬಳಿಕ ಬಹುಭಾಷಾ ನಟಿಯಾಗಿ ಮಿಂಚಿದ್ದ ನಟಿ ಮೀರಾ ಜಾಸ್ಮಿನ್ ಮದುವೆಯಾದ ಬಳಿಕ ವಿದೇಶದಲ್ಲಿ ಸೆಟಲ್ ಆಗಿದ್ದರು. ಆದರೆ ಈಕೆಯ ವೈವಾಹಿಕ ಜೀವನಕ್ಕೆ ಸರಿ ಇಲ್ಲ ಎಂದು ಸಾಕಷ್ಟು ವರದಿಗಳು ಬಿತ್ತರವಾಗಿದ್ದವು. ಇದೀಗ ಸುಮಾರು 10 ವರ್ಷಗಳ ಬಳಿಕ ಗಟ್ಟಿ ಪಾತ್ರದೊಂದಿಗೆ ನಟಿ ಟಾಲಿವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ.
ಮಲಯಾಳಂ, ತಮಿಳು, ತೆಲುಗು, ಕನ್ನಡ ಅಂತ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದ ಮೀರಾ ಜಾಸ್ಮಿನ್ 2014ರಲ್ಲಿ ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿದ್ದರು. ಅನಿಲ್ ಜಾನ್ ಎಂಬುವವರನ್ನು ಮದುವೆ ಆಗಿ ದುಬೈ ಸೇರಿದ್ದರು. ಅಲ್ಲಿಂದ ಕೆಲವು ವರ್ಷಗಳ ಕಾಲ ಮೀರಾ ಜಾಸ್ಮಿನ್ ಸಿನಿಮಾದಿಂದ ದೂರವೇ ಇದ್ದರು. ಮಲಯಾಳಂನಲ್ಲಿ ಆಗೊಂದು ಈಗೊಂದು ಸಿನಿಮಾ ಮಾಡಿದ್ದರಷ್ಟೇ. ಆದರೆ, ಇದೀಗ 10 ವರ್ಷಗಳ ಬಳಿಕ ಟಾಲಿವುಡ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ತೆಲುಗಿನ ಹೀರೋ ಶ್ರೀವಿಷ್ಣು ಜೊತೆ ಮೀರಾ ಎಂಟ್ರಿ ಕೊಟ್ಟಿದ್ದಾರೆ. ‘ಸ್ವಾಗ್’ ಹೆಸರಿನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ರಾಣಿ ಉತ್ಪಲಾ ದೇವಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಸದ್ಯ ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.
ಟಾಲಿವುಡ್ನಲ್ಲಿ ಪವನ್ ಕಲ್ಯಾಣ್, ರವಿ ತೇಜ, ಬಾಲಯ್ಯ, ಜೊತೆ ಮೀರಾ ದಶಕಗಳ ಹಿಂದೆ ನಟಿಸಿದ್ದರು. ಈಗ ಮತ್ತೆ ರೀ ಎಂಟ್ರಿ ಕೊಟ್ಟಿರುವ ಮೀರಾರನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಪ್ರಸ್ತುತ ತಮಿಳಿನ ‘ದಿ ಟೆಸ್ಟ್’ ಮತ್ತು ತೆಲುಗಿನ ‘ಸ್ವಾಗ್’ ಸಿನಿಮಾಗಳು ನಟಿಯ ಕೈಯಲ್ಲಿವೆ.
ಮೀರಾ ನಟಿಸಿದ ‘ಪಾದಂ ಒನ್ನು: ಒರು ವಿಲಾಪಂ’ ಅನ್ನುವ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ಸದ್ಯ ತೆಲುಗು ಚಿತ್ರರಂಗಕ್ಕೆ ಮತ್ತೆ ಮೀರಾ ಎಂಟ್ರಿ ಕೊಡುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸಖಷ್ ಖುಷಿಯಾಗಿದ್ದಾರೆ.