ಝೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರವಾಹಿ ಮೂಲಕ ಖ್ಯಾತಿ ಗಳಿಸಿದ ಮಾನಸ ಮನೋಹರ್ ಅಭಿಮಾನಿಗಳಿಗೆ ಖುಷಿಯ ಸುದ್ದಿಯೊಂದನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಮಾನಸ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಅವುಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದ ಹಾಗೆ ಮಾನಸಾಗೆ ಇದು ಎರಡನೇ ಮದುವೆ. ಈ ಬಗ್ಗೆ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದಾರೆ.
ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮೀರಾ ಪಾತ್ರಕ್ಕೆ ಜೀವ ತುಂಬಿದ್ದ ಮನಸಾ ಮನೋಹರ್ ಆ ಬಳಿಕ ಸಾಕಷ್ಟು ಆಫರ್ ಗಳನ್ನು ಪಡೆದುಕೊಳ್ತಿದ್ದಾರೆ. ಈ ಮಧ್ಯೆ ಮನಸಾ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಸದ್ಯ ಮಾನಸ ಮನೋಹರ್ ಮದುವೆಯಾಗುತ್ತಿರುವ ಹುಡುಗ ಯಾರೆಂಬ ಕುತೂಹಲ ಎಲ್ಲರಲ್ಲೂ ಇದೆ. ಮಾನಸ ಫೋಟೋಗಳನ್ನ ಹಂಚಿಕೊಂಡರು, ಅವರ ಹುಡುಗನನ್ನು ಟ್ಯಾಗ್ ಮಾಡಿರಲಿಲ್ಲ. ಆದರೆ ಮಾನಸ ಅವರ ಅಭಿಮಾನಿಗಳು ಮದುವೆಯಾಗುತ್ತಿರುವ ಹುಡುಗನನ್ನು ಹುಡುಕಿ ಟ್ಯಾಗ್ ಮಾಡಿದ್ದಾರೆ. ಅವರ ಹೆಸರು ಪ್ರೀತಂ ಚಂದ್ರ. ಫುಟ್ ಬಾಲ್ ಪ್ಲೇಯರ್ ಎಂಬುದು ಅವರ ಸೋಷಿಯಲ್ ಮೀಡಿಯಾ ನೋಡಿದಾಗ ತಿಳಿಯುತ್ತೆ. ಹಾಗೇ ಫುಟ್ ಬಾಲ್ ಅಕಾಡೆಮಿ ಕೂಡ ನಡೆಸುತ್ತಿದ್ದಾರೆ. ಮಾನಸ ಅವರಿಗೆ ಇದು ಎರಡನೇ ಮದುವೆ. ಅದರ ಬಗ್ಗೆಯೂ ನೆಟ್ಟಿಗರು ಕಮೆಂಟ್ ಹಾಕಿದ್ದಾರೆ. ಅದನ್ನು ಪಾಸಿಟಿವ್ ಹಾಗೇ ತೆಗೆದುಕೊಂಡಿರೋ ಮಾನಸ, ಅದಕ್ಕೂ ಉತ್ತರಿಸಿದ್ದಾರೆ.
‘ನಿಮ್ಮ ಅನುಮಾನಗಳನ್ನು ಹೋಗಲಾಡಿಸುತ್ತಿದ್ದೇನೆ. ಹೌದು ಇದು ನನ್ನ ಎರಡನೇ ಮದುವೆ. ಜೀವನದಲ್ಲಿ ಕೆಲವು ಬಾರಿ ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ಆದರೂ ಎಲ್ಲರ ಒಳಿತಿಗಾಗಿ ಆ ಸಂಬಂಧವನ್ನು ಮುಂದುವರೆಸಬೇಕು. ಆದರೆ ಈಗ ನಾನು ನನ್ನ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ಪ್ರೀತಂ ಮತ್ತು ನಾನಿ ಮದುವೆಯಾಗುತ್ತಿದ್ದೇವೆ. ನನಗೆ ಯಾವುದೇ ಅಪರಾಧ ಎನಿಸುತ್ತಿಲ್ಲ. ಆದರೆ ಕೃತಜ್ಞತೆ ಮಾತ್ರ ಇದೆ. ಆದ್ದರಿಂದ ಅದನ್ನು ವ್ಯಕ್ತಪಡಿಸುತ್ತಿದ್ದೇನೆ. ಪ್ರತಿಯೊಬ್ಬರ ಪ್ರೀತಿಗೆ ಧನ್ಯವಾದಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಧನ್ಯವಾದಗಳು’ ಎಂದು ಮಾನಸ ಪ್ರತಿಕ್ರಿಯಿಸಿದ್ದಾರೆ.