ಬೆಂಗಳೂರು: ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಹಂಗಾಮಿ ಸಿಎಂ ಬೊಮ್ಮಾಯಿ (Interim CM Bommai)ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ಜರುಗಿದೆ. ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಹಂಗಾಮಿ ಸಿಎಂ ಬೊಮ್ಮಾಯಿ ಸಭೆ ನಡೆಸಿ ಚರ್ಚಿಸಿದ್ದಾರೆ. ಇಷ್ಟು ದಿನ ತಮ್ಮ ಆಡಳಿತದಲ್ಲಿ ಸಾಥ್ ಕೊಟ್ಟ ಹಿನ್ನೆಲೆಯಲ್ಲಿ, ಅನೌಪಚಾರಿಕವಾಗಿ ಹಿರಿಯ ಅಧಿಕಾರಿಗಳ ಜೊತೆ ಹಂಗಾಮಿ ಸಿಎಂ ಬೊಮ್ಮಾಯಿ ಅವರು,
ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಸರ್ಕಾರದ ಹಿರಿಯ IAS ಮತ್ತು IPS ಅಧಿಕಾರಗಳು ಭಾಗಿಯಾಗಿದ್ದಾರೆ. ಇನ್ನೂ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಕಾಂಗ್ರೆಸ್ ಬಹುಮತದಿಂದ ಗೆದ್ದಿದ್ದು, ಬಿಜೆಪಿ ಹೀನಾಯವಾಗಿ ಸೋತಿದೆ. ಘಟಾನುಘಟಿ ಬಿಜೆಪಿ ನಾಯಕರೇ ಸೋತಿರುವುದು ಗಮನಿಸಬೇಕಾದ ವಿಷಯ. ಹೀಗಾಗಿ ಇನ್ನೂ ಕೂಡ ಬಿಜೆಪಿ ನಾಯಕರು ಸೋಲಿನಿಂದ ಹೊರ ಬಂದಿಲ್ಲ.