ಬ್ರಿಟನ್ನಲ್ಲಿ ಪ್ರಸಕ್ತ ಆಡಳಿತದಲ್ಲಿರುವ ಕನ್ಸರ್ವೇಟಿವ್ ಪಕ್ಷವು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಜೊತೆಗೆ ಬ್ರಿಟನ್ ಪ್ರಧಾನಿ, ಇನ್ಪಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಉತ್ತರ ಯಾರ್ಕ್ಷೈರ್ನ ತಮ್ಮ ಸ್ವಕ್ಷೇತ್ರದಲ್ಲಿ ಗೆಲುವು ಸಾಧಿಸುವುದಕ್ಕೂ ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚುನಾವಣೆ ಪೂರ್ವ ಸಮೀಕ್ಷೆಯೊಂದು ಹೇಳಿದೆ.
ಚುನಾವಣೆ ಪ್ರಚಾರ ಸಂಸ್ಥೆ ಸಿವಿಲ್ ಸೊಟೈಟಿಯು 15,029 ವ್ಯಕ್ತಿಗಳ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆಯ ವರದಿ ನೀಡಿದೆ. ಅದರ ಪ್ರಕಾರ ಬ್ರಿಟನ್ನ ಆಡಳಿತಾರೂಢ ಪಕ್ಷ ಕನ್ಸರ್ವೇಟಿವ್ಗಿಂತ 19 ಪಾಯಿಂಟ್ಗಳಷ್ಟು ಹೆಚ್ಚು ಮತಗಳನ್ನು ವಿಪಕ್ಷ ಲೇಬರ್ ಪಕ್ಷ ಪಡೆದುಕೊಳ್ಳಲಿದೆ ಎಂದಿದೆ. ಈ ವರ್ಷಾಂತ್ಯಕ್ಕೆ ಬ್ರಿಟನ್ನಲ್ಲಿ ಸಾರ್ವಜನಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ.