ಬೆಂಗಳೂರು: ವಿಧಾನಸಭೆ ಚುನಾವಣೆಯ ನಂತರ ಆಡಳಿತ ಮತ್ತು ಪ್ರತಿಪಕ್ಷದ ಸ್ಥಾನಗಳು ಅದಲು ಬದಲಾಗುವುದು ಸಹಜ. ಇದರಲ್ಲಿ ಹೊಸತೇನಿಲ್ಲ ಆದರೆ ಈಗ ಮೇಲ್ಮನೆಯಲ್ಲಿ ಪ್ರತಿಪಕ್ಷದಲ್ಲಿದ್ದಾಗ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದವರು ಈಗ ಆಡಳಿತ ಪಕ್ಷದ ಕೊನೆಯ ಸಾಲಿಗೆ ಬಂದಿದ್ದಾರೆ ಹಾಗೆ ಆಡಳಿತ ಪಕ್ಷದಲ್ಲಿದ್ದಾಗ ಎರಡು-ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದವರು ಈಗ ಪ್ರತಿಪಕ್ಷದಲ್ಲಿ ‘ಮುಂಬಡ್ತಿ’ ಪಡೆದು ಮೊದಲ ಸಾಲಿನಲ್ಲಿ ಕುಳಿತುಕೊಂಡಿರುವುದನ್ನು ನಾವು ನೋಡಬಹುದು.
ಪ್ರತಿಪಕ್ಷದ ನಾಯಕರಾಗಿ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಬಿ.ಕೆ.ಹರಿಪ್ರಸಾದ್ ಈಗ ಕೊನೆ ಸಾಲಿನಲ್ಲಿ ಕುಳಿತುಕೊಂಡಿದ್ದರು. ಲಕ್ಷ್ಮಣ ಸವದಿ ಕುಳಿತುಕೊಳ್ಳುತ್ತಿದ್ದ ಸ್ಥಾನದಲ್ಲಿ ಜಗದೀಶ್ ಶೆಟ್ಟರ್ ಪ್ರತ್ಯಕ್ಷರಾಗಿದ್ದಾರೆ.
ಅದೇ ರೀತಿ ಆಡಳಿತ ಪಕ್ಷದಲ್ಲಿದ್ದಾಗ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಬಿಜೆಪಿಯ ಶಶೀಲ್ ನಮೋಶಿ ಈಗ ಮುಂಬಡ್ತಿ ಪಡೆದು ಮೊದಲ ಸಾಲಿಗೆ ಬಂದಿದ್ದಾರೆ.
ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಜೆಡಿಎಸ್ನ ಟಿ.ಎ. ಶರವಣ ಅವರು ಈಗ ಮೊದಲ ಸಾಲಿಗೆ ಮುಂಬಡ್ತಿ ಪಡೆದು ಕುಳಿತುಕೊಂಡಿದ್ದಾರೆ.