ಪೇರಳೆ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.ಹೆಚ್ಚಿನ ಜನರಿಗೆ ತಿಳಿದಿಲ್ಲದ ವಿಷಯವೆಂದರೆ ಪೇರಳೆಯಲ್ಲಿ ನಿಂಬೆಗಿಂತ ವಿಟಮಿನ್ ಸಿ ಸಮೃದ್ಧವಾಗಿದೆ. ಹೆಚ್ಚಿನ ಮಟ್ಟದ ವಿಟಮಿನ್ ಸಿ ಇರುವುದರಿಂದ, ಪೇರಳೆ ತಿನ್ನುವುದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಯಾವುದೇ ಸೋಂಕುಗಳನ್ನು ತಡೆಯುತ್ತದೆ ಮತ್ತು ಶೀತ ಮತ್ತು ಗಂಟಲು ನೋವಿಗೆ ಕಾರಣವಾಗುವುದಿಲ್ಲ.
ಆದರೆ ಗಂಡಸರು ಹೆಚ್ಚಾಗಿ ಪೇರಳೆ ಹಣ್ಣನ್ನು ತಿನ್ನಬಾರದು ಯಾಕಂದರೆ ಅವರ ಯಕೃತ್ ಸಮಸ್ಯೆಗೆ ಪೆಟ್ಟಾದರೆ ಮಕ್ಕಳಾಗದ ಪರಿಸ್ಥಿತಿ ಉಂಟಾಗುತ್ತದೆ
ಈ ಹಣ್ಣಿನಲ್ಲಿ ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಸೂಚ್ಯಂಕವನ್ನು ಪಡೆದುಕೊಂಡಿದೆ. ಇದನ್ನು ಮಧುಮೇಹ ಇರುವವರು ಸೇವಿಸಬಹುದು. 100 ಗ್ರಾಂ ಹಣ್ಣಿನಲ್ಲಿ 9 ಗ್ರಾಂ ನಷ್ಟು ಸಕ್ಕರೆ ಅಂಶ ಇರುತ್ತದೆ. ಆದ್ದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವ ಸಾಧ್ಯತೆಗಳು ಇರುತ್ತವೆ. ಮಧು ಮೇಹದವರು ಈ ಹಣ್ಣನ್ನು ತಿನ್ನಬಹುದು ಆದರೆ ಅತಿಯಾದ ಸೇವನೆಯೊಂದಿಗೆ ಅಲ್ಲ ಎನ್ನುವುದನ್ನು ನೆನಪಿನಲ್ಲಿ ಇಡಬೇಕು. ಮಿತವಾಗಿ ತಿಂದರೆ ಯಾವುದೇ ತೊಂದರೆ ಉಂಟಾಗದು.
ಪೇರಳೆ ಹಣ್ಣಿನಲ್ಲಿ ನಾರಿನಂಶ ಸಮೃದ್ಧವಾಗಿದೆ. ಇದು ಮಲಬದ್ಧತೆಯನ್ನು ತಡೆಯುವುದು. ಜೊತೆಗೆ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆದರೆ ಅತಿಯಾದ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಕೆಡಿಸುವುದು ಕರುಳಿನ ಕಿರಿಕಿರಿಯಿಂದ ನೀವು ಬಳಲುತ್ತಿದ್ದರೆ ಇದು ಕರುಳಿನ ಆರೋಗ್ಯವನ್ನು ಕೆಡಿಸುತ್ತದೆ. ತೀವ್ರವಾದ ನೋವು ಹಾಗೂ ಅನಾರೋಗ್ಯಕ್ಕೆ ಕಾರಣವಾಗುವುದು. ಹಾಗಾಗಿ ಇಂತಹ ಸಮಸ್ಯೆ ಇರುವವರು ಮಿತವಾಗಿ ಸೇವಿಸಬೇಕು.
ಒಂದು ದಿನಕ್ಕೆ ಒಂದು ಪೇರಳೆ ಹಣ್ಣನ್ನು ಸವಿಯುವುದು ಆರೋಗ್ಯಕರವಾದುದ್ದು. ಅದಕ್ಕಿಂತ ಹೆಚ್ಚು ಸವಿಯುವುದು ಉತ್ತಮ ಆಯ್ಕೆ ಆಗಿರುವುದಿಲ್ಲ. ಊಟದ ನಂತರ ತಾಂಬೂಲದ ರೂಪದಲ್ಲಿ ಈ ಹಣ್ಣನ್ನು ಸವಿಯಬಹುದು. ಇಲ್ಲವಾದರೆ ಎರಡು ಊಟದ ನಡುವೆ ಇರುವ ಸಮಯದಲ್ಲಿ ಉಂಟಾಗುವ ಸಣ್ಣ ಹಸಿವನ್ನು ತಣಿಸಲು ಸವಿಯಬಹುದು. ರಾತ್ರಿ ಮಲಗುವಾಗ ಈ ಹಣ್ಣನ್ನು ಸವಿಯಬಾರದು. ಅದು ಶೀತ ಅಥವಾ ಕೆಮ್ಮಿಗೆ ಕಾರಣವಾಗಬಹುದು.