ಪ್ರತಿ ದಿನ ಈರುಳ್ಳಿ ಮತ್ತು ಬೆಲ್ಲ ತಿಂದರೆ ಹಾರ್ಟ್ ಪ್ರಾಬ್ಲಮ್ ಬರಲ್ಲ ಎಂದು ಹೇಳುತ್ತಾರೆ. ಆದರೆ ಹಸಿ ಈರುಳ್ಳಿ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಅಷ್ಟು ಪ್ರಮಾಣದಲ್ಲಿ ಇದರಲ್ಲಿ ಔಷಧೀಯ ಗುಣಗಳು ಅಡಗಿವೆ ಎಂದು ಹೇಳುತ್ತಾರೆ
ನಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಜೊತೆಗೆ ಹೃದಯ ರಕ್ತನಾಳಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಸರಿಪಡಿಸುತ್ತದೆ ಮತ್ತು ಮಧುಮೇಹ ಸಮಸ್ಯೆಯನ್ನು ದೂರಮಾಡುತ್ತದೆ.
- ಈರುಳ್ಳಿಯಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶವು ಪುರುಷರಲ್ಲಿ ನೈಸರ್ಗಿಕವಾಗಿ ವೀರ್ಯದ ಗಣತಿ ಯನ್ನು ಹೆಚ್ಚಿಸಲು ನೆರವಿಗೆ ಬರುತ್ತವೆ.
- ಹೀಗಾಗಿ ಲೈಂಗಿಕ ಸಮಸ್ಯೆ ಇರುವ ಪುರುಷರು, ಒಂದು ಚಮಚ ಈರುಳ್ಳಿ ರಸವನ್ನು, ಇಷ್ಟೇ ಪ್ರಮಾಣದಲ್ಲಿ ಶುಂಠಿಯ ರಸ ದೊಂದಿಗೆ, ಬೆರೆಸಿ ಕುಡಿಯುವು ದರಿಂದ,ಒಳ್ಳೆಯ ಫಲಿತಾಂಶ ವನ್ನು ಕಾಣಬಹುದು.
- ನಿಮ್ಮ ದೈನಂದಿನ ಸಲಾಡ್ ಗೆ, ಹಾಕಿಕೊಂಡು ಹಾಗೆ ಹಸಿ ಯಾಗಿ ತಿಂದರೆ ಒಳ್ಳೆಯದು. ಬೇಕೆಂದರೆ ಮೊಸರಿನ ಜೊತೆ ಕೂಡ ಸ್ವಲ್ಪ ಹಸಿ ಈರುಳ್ಳಿಯನ್ನು ಮಿಕ್ಸ್ ಸೇವನೆ ಮಾಡ ಬಹುದು
- ಬೇಯಿಸಿ ಅಥವಾ ಎಣ್ಣೆಯಲ್ಲಿ ಕರಿದು ಈರುಳ್ಳಿಯನ್ನು ತಿನ್ನುವ ಬದಲು, ಕೇವಲ ಹಸಿಯಾಗಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ
- ಈರುಳ್ಳಿಯಲ್ಲಿವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ನೆರವಾಗುತ್ತದೆ, ಹೀಗಾಗಿ ಚಳಿಗಾಲದ ಸಂದರ್ಭದಲ್ಲಿ ದೈನಂದಿನ ಅಡುಗೆಯಲ್ಲಿ ಮಿತವಾಗಿ ಈರುಳ್ಳಿಯನ್ನು ಬಳಸಿ.
- ದಿನಾ ಸಣ್ಣ ತುಂಡು ಬೆಲ್ಲದ ಜೊತೆಗೆ, ಸಣ್ಣ ಪೀಸ್ ಈರುಳ್ಳಿ ಯನ್ನು ಕೂಡ ತಿನ್ನುವುದರಿಂದ, ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞ ಲವನೀತ್ ಬಾತ್ರಾ ಅವರು
- ಈರುಳ್ಳಿಯಲ್ಲಿ ಕಂಡುಬರುವ ಸಲ್ಫರ್ ಹಾಗು ಕ್ರೋಮಿಯಂ ಅಂಶವು, ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮಧುಮೇಹ ಕಾಯಿಲೆ ಇದ್ದವರಿಗೂ ಈರುಳ್ಳಿ ಬಹಳ ಒಳ್ಳೆಯದು.
- ಈರುಳ್ಳಿಯಲ್ಲಿ ಪ್ರೆಬಯೋಟಿಕ್ ಇನ್ಸುಲಿನ್ ಅಂಶ ಹೆಚ್ಚಾಗಿದ್ದು, ಕರುಳಿನ ಭಾಗದ ಆರೋಗ್ಯಕ್ಕೆ ಇದು ಉತ್ತಮವಾದ ಒಂದು ತರಕಾರಿ ಆಗಿದೆ ಎಂದು ಹೇಳಬಹುದು.
- ಕರುಳಿನ ಭಾಗದಲ್ಲಿ ಸಹಕಾರಿಯಾಗಿ ಕೆಲಸ ಮಾಡುವ ಬ್ಯಾಕ್ಟೀರಿಯಾಗಳ ಅಭಿವೃದ್ಧಿಯನ್ನು ಕಂಡುಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಮಧುಮೇಹ ಸಮಸ್ಯೆ ಇರುವವರಿಗೆ ಮತ್ತು ಇದರ ರೋಗಲಕ್ಷಣ ಇರುವ ಜನರಿಗೆ ಅನುಕೂಲಕರವಾಗಿ ಕೆಲಸ ಮಾಡುತ್ತದೆ.
- ಇನ್ನೊಂದು ಮುಖ್ಯ ವಿಚಾರ ಎಂದರೆ ಈರುಳ್ಳಿಯಲ್ಲಿ ಕಂಡುಬರುವ ವಿಟಮಿನ್ ಸಿ ಅಂಶ, ದೇಹದಲ್ಲಿ ಕೊಲಾಜನ್ ಅಂಶದ ಉತ್ಪತ್ತಿಯನ್ನು ಹೆಚ್ಚು ಮಾಡಿ ಚರ್ಮಕ್ಕೆ ಹಾಗೂ ತಲೆ ಕೂದಲಿಗೆ ಅನುಕೂಲಕರವಾಗಿ ಕೆಲಸ ಮಾಡಲಿದೆ.
- ಈರುಳ್ಳಿ ಸೇವನೆಯಿಂದ ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ ಅಂಶ ಕೂಡ ಹೆಚ್ಚು ಸಿಗಲಿದ್ದು, ಮೂಳೆಗಳಿಗೆ ಹಾಗೂ ಹಲ್ಲುಗಳ ಬಲವರ್ಧನೆಗೆ ಹೆಚ್ಚು ಸಹಾಯಕವಾಗಲಿದೆ.
- ಈರುಳ್ಳಿಯಲ್ಲಿ ಸುಮಾರು 25 ಬಗೆಯ ಆಂಟಿಆಕ್ಸಿಡೆಂಟ್ ಅಂಶಗಳು ಸಿಗಲಿದ್ದು, ಕ್ಯಾನ್ಸರ್, ಮಧುಮೇಹ ಹಾಗೂ ಹೃದಯದ ಕಾಯಿಲೆಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
- ದೇಹಕ್ಕೆ ಅಗತ್ಯವಾದ ಅಂಶಗಳಾದ ವಿಟಮಿನ್ ಸಿ, ವಿಟಮಿನ್ 6, ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರವು ಈರುಳ್ಳಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಮೂಳೆ ಆರೋಗ್ಯ ಮತ್ತು ಆಲ್ಝೈಮರ್ ನಂತರ ನರಸಂಬಂಧಿ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.