ಬೆಳಗಾವಿ : ಮಹಾರಾಷ್ಟ್ರ ಸರ್ಕಾರದಿಂದ ಹಣಕಾಸಿನ ನೆರವು ಪಡೆದು ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ಗ್ರಾಮದ ಖಾಸಗಿ ಜಾಗದಲ್ಲಿ ಸ್ಮೃತಿ ಭವನ ನಿರ್ಮಿಸಲು ಈಗಾಗಲೇ ಭೂಮಿ ಪೂಜೆ ಮಾಡಿದೆ. 1986 ರಲ್ಲಿ ಬೆಳಗಾವಿಯಲ್ಲಿ ನಡೆದ ಸೀಮಾ ಲಢಾಯಿ (ಗಡಿ ಚಳುವಳಿ) ಕಾಲಕ್ಕೆ ನಡೆದ ಹಿಂಸಾಚಾರ ನೆನಪಿಗಾಗಿ ಸ್ಮೃತಿ ಭವನ ನಿರ್ಮಾಣಕ್ಕೆ ಮುಂದಾಗಿದೆ.
ಮತ್ತೆ ಗಡಿಯಲ್ಲಿ ನಾಡದ್ರೋಹಿ ಎಂಇಎಸ್ ಪುಂಡಾಟ ಮೆರೆದಿದ್ದು, ಬೆಳಗಾವಿಯಲ್ಲಿ ಸ್ಮೃತಿ ಭವನ ನಿರ್ಮಿಸಲು ನಿರ್ಧಾರ ಮಾಡಿದೆ. ಎಂಇಎಸ್ ನ ಸ್ಮೃತಿ ಭವನಕ್ಕೆ ಸರ್ಕಾರ ಬ್ರೇಕ್ ಹಾಕಬೇಕೆಂಬ ಆಗ್ರಹ ಕೇಳಿಬಂದಿದೆ.
ಅಂದು ಎನ್.ಸಿಪಿ ನಾಯಕ ಶರದ್ ಪವಾರ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸೀಮಾ ಲಡಾಯಿ ನಡೆದಿತ್ತು. ಮಹಾರಾಷ್ಟ್ರದಿಂದ ನಾಯಕರು, ಬೆಂಬಲಿಗರು ಬೆಳಗಾವಿಗೆ ನುಗ್ಗಿದ್ದರು. ಈ ವೇಳೆ ಭಾರೀ ಪ್ರಮಾಣದಲ್ಲಿ ಹಿಂಸಾಚಾರ ನಡೆದಿತ್ತು. ಕರ್ನಾಟಕ ಪೊಲೀಸರು ಗೋಲಿಬಾರ್ ನಡೆಸಿದ್ದರು. ಈ ಗೋಲಿಬಾರನಲ್ಲಿ 9 ಜನ ಹಿಂಸಾಚಾರಿಗಳು ಸಾವನ್ನಪ್ಪಿದರು. ಈ ಹಿಂಸಾಚಾರಿಗಳನ್ನ ಹುತಾತ್ಮರೆಂದು ಬಿಂಬಿಸುತ್ತಿರೋ ಎಂಇಎಸ್ ಪುಂಡರು, ಪ್ರತಿ ವರ್ಷ ಜೂನ್ 1 ರಂದು ಹುತಾತ್ಮ ದಿನ ಆಚರಿಸುತ್ತ ಬಂದಿದ್ದಾರೆ.
