ಖ್ಯಾತ ಬಹುಭಾಷ ನಟಿ ಜ್ಯೂಲಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್ ಸದ್ಯ ಕಷ್ಟದ ದಿನಗಳನ್ನು ನಡೆಸುತ್ತಿದ್ದಾರೆ. ಆದರೂ ಯಾರ ಬಳಿಯೂ ಸಹಾಯ ಕೇಳದೆ ಸೋಪು ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಐಶ್ವರ್ಯ ಭಾಸ್ಕರನ್ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿ ಇದೀಗ ತಾವು ಎದುರಿಸಿದ ಕಷ್ಟವನ್ನು ನೆನೆದು ಐಶ್ವರ್ಯ ಭಾಸ್ಕರನ್ ಕಣ್ಣೀರಿಟ್ಟಿದ್ದಾರೆ.
1989ನೇ ಇಸವತಿಯಲ್ಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಐಶ್ವರ್ಯ ಭಾಸ್ಕರನ್ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದರು ಕಷ್ಟದಲ್ಲೇ ಜೀವನ ದೂಡುತ್ತಿದ್ದಾರೆ. ಸಿನಿಮಾದ ಜೊತೆಗೆ ಸೀರಿಯಲ್ ನಲ್ಲಿ ನಟಿಸಿದ್ದರು ಇತ್ತೀಚಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿಲ್ಲವಂತೆ. ಹಾಗಾಗಿ ತಮ್ಮದೇ ಯುಟ್ಯೂಬ್ ಕೂಡ ಮಾಡಿಕೊಂಡಿದ್ದು, ಅಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಹೊಸ ಅಡುಗೆಗಳ ವಿಡಿಯೋ ಕೂಡ ಹಾಕಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ನಟಿ ಗರಂ ಆಗಿದ್ದಾರೆ.
ತಾವು ಸಿಂಗಲ್ ಇರುವ ಕಾರಣದಿಂದಾಗಿಯೇ ಕೆಲವರು ಕೆಟ್ಟ ಕೆಟ್ಟ ಮೆಸೇಜ್ ಗಳನ್ನು ಕಳುಹಿಸುತ್ತಾರೆ. ನೋಡೋಕೆ ಇನ್ನೂ ಚೆನ್ನಾಗಿ ಇದ್ದೀಯಾ, ರಾತ್ರಿ ಸಿಗ್ತೀಯಾ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಒಬ್ಬ ವ್ಯಕ್ತಿಯು ಮಧ್ಯೆ ರಾತ್ರಿ ಮೆಸೇಜ್ ಮಾಡಿ, ಇಬ್ಬರೂ ಸೋಪು ಮಾಡೋಣ ಬಾ ಎಂದು ಕರೆದಿದ್ದಾನೆ ಎಂದು ಬಹಿರಂಗವಾಗಿ ನೋವನ್ನು ಹೇಳಿಕೊಂಡಿದ್ದಾರೆ ಐಶ್ವರ್ಯಾ ಭಾಸ್ಕರನ್.
ಕೆಟ್ಟದ್ದಾಗಿ ಮೆಸೇಜ್ ಮಾಡಿರುವ ವ್ಯಕ್ತಿಗೆ ಉತ್ತರವಾಗಿ, ‘ಸೋಪು ಮಾರಿಕೊಂಡು ಬದುಕುತ್ತೇನೆ ಹೊರತು ನನ್ನನ್ನು ನಾನು ಮಾರಿಕೊಳ್ಳುವುದಿಲ್ಲ’ ಎಂದು ಖಡಕ್ ಸಂದೇಶವನ್ನು ಅವರು ನೀಡಿದ್ದಾರೆ. ಅಂದಹಾಗೆ ಜ್ಯೂಲಿ ಲಕ್ಷ್ಮಿ ಅವರ ಮೊದಲ ಪತಿಯ ಮಗಳು ಇವರಾಗಿದ್ದು, ಡಿವೋರ್ಸ್ ನಂತರ ತಾಯಿಯಿಂದ ದೂರ ಇರುವುದಾಗಿ ತಿಳಿಸಿದ್ದಾರೆ.