ನಟಿಯರು ಚಿತ್ರರಂಗದಲ್ಲಿ ತಮಗಾಗುತ್ತಿರುವ ದೌರ್ಜನ್ಯಗಳು ಕುರಿತು ಮೌನ ಮುರಿಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ತಾವು ಅನುಭವಿಸಿದ ನೋವುಗಳ ಬಗ್ಗೆ ಮಾತನಾಡಿದ್ದಾರೆ. ಇದೀಗ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಹಿಂದಿ ಚಿತ್ರರಂಗದ ಹೀರೋಗಳ ವಿರುದ್ಧ ಹರಿಹಾಯುತ್ತಾರೆ.
ಚಿತ್ರರಂಗದಲ್ಲಿ ಅನೇಕರನ್ನು ಕಂಗನಾ ಎದುರು ಹಾಕಿಕೊಂಡಿದ್ದಾರೆ. ಇದೀಗ ನಟಿ ಬಾಲಿವುಡ್ ನಟರ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬಾಲಿವುಡ್ ಹೀರೋಗಳೇ ನಟಿಯರಿಗೆ ಕಿರುಕುಳ ನೀಡುತ್ತಾರೆ ಎಂದಿದ್ದಾರೆ.
‘ಆ ಹೀರೋಗಳು ಮಹಿಳೆಯರಿಗೆ ಹೇಗೆ ಕಿರುಕುಳ ನೀಡುತ್ತಾರೆ ಗೊತ್ತಾ? ಅವರು ಊಟಕ್ಕೆ ಕರೆಯುತ್ತಾರೆ, ಮೆಸೇಜ್ ಮಾಡುತ್ತಾರೆ ನಂತರ ಮನೆಗೆ ಬರುವಂತೆ ಹೇಳುತ್ತಾರೆ’ ಎಂದಿದ್ದಾರೆ ಕಂಗನಾ ರಣಾವತ್. ಕಂಗನಾ ಅವರು ಈ ರೀತಿಯ ಅನೇಕ ಆರೋಪಗಳನ್ನು ಈ ಮೊದಲು ಕೂಡ ಮಾಡಿದ್ದರು.
‘ಕೋಲ್ಕತ್ತಾ ರೇಪ್ ಹಾಗೂ ಮರ್ಡರ್ ಕೇಸ್ ನೋಡಿ. ನನಗೆ ಬರುತ್ತಿರುವ ಅತ್ಯಾಚಾರ ಬೆದರಿಕೆಗಳನ್ನು ನೋಡಿ. ನಾವು ಮಹಿಳೆಯರಿಗೆ ಗೌರವ ಕೊಡಲ್ಲ ಅನ್ನೋದು ಗೊತ್ತು. ಸಿನಿಮಾ ರಂಗ ಬೇರೆ ರೀತಿ ಇಲ್ಲ. ಕಾಲೇಜು ಹುಡುಗರು ಯುವತಿಯರ ಮೇಲೆ ಕಮೆಂಟ್ ಮಾಡುತ್ತಾರೆ. ಸಿನಿಮಾ ರಂಗದ ಹೀರೋಗಳು ಭಿನ್ನವಾಗಿಲ್ಲ. ಅವರು ಆ ರೀತಿಯೇ ಇದ್ದಾರೆ. ಕೆಲಸದ ಸ್ಥಳದಲ್ಲಿ ನಮ್ಮನ್ನು ಹೇಗೆ ಟ್ರೀಟ್ ಮಾಡುತ್ತಾರೆ ಅನ್ನೋದು ಗೊತ್ತು’ ಎಂದಿದ್ದಾರೆ ಅವರು.
‘ಸರೋಜ್ ಖಾನ್ ಒಮ್ಮೆ ಲೈಂಗಿಕ ಕಿರಕುಳದ ಬಗ್ಗೆ ಮಾತನಾಡಿದ್ದರು. ಅತ್ಯಾಚಾರ ಮಾಡುತ್ತಾರೆ ಜೊತೆಗೆ ಊಟವನ್ನೂ ನೀಡುತ್ತಾರೆ ಎಂದಿದ್ದರು. ನಮ್ಮ ಹೆಣ್ಣು ಮಕ್ಕಳ ಸ್ಥಿತಿ ಚಿತ್ರರಂಗದಲ್ಲಿ ಈ ರೀತಿಯಲ್ಲಿದೆ’ ಎಂದಿದ್ದಾರೆ ಕಂಗನಾ. ಅವರ ಹೇಳಿಕೆಗೆ ಅನೇಕರು ಅಚ್ಚರಿ ಹೊರಹಾಕಿದ್ದಾರೆ.