ಬೆಂಗಳೂರು: ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರ ನಿಲ್ದಾಣದವರೆಗೆ ಇಂದು, ಸೆಪ್ಟೆಂಬರ್ 6 ಮತ್ತು 11 ರಂದು ಪೂರ್ಣ ದಿನ ಮೆಟ್ರೋ (Metro) ಸೇವೆ ಸ್ಥಗಿತಗೋಂಡಿರುತ್ತದೆ.
ವಿಸ್ತರಿಸಿದ ಮಾರ್ಗದಲ್ಲಿ ಮೆಟ್ರೋ ಸಿಗ್ನಲಿಂಗ್ ಪರೀಕ್ಷೆ ಹಿನ್ನೆಲೆ ಇಡೀ ದಿನ ಸಿಗ್ನಲಿಂಗ್ ಟೆಸ್ಟಿಂಗ್ ನಡೆಯಲಿದೆ.
ಆಗಸ್ಟ್ ಮಾತ್ರವಲ್ಲದೆ, ಸೆಪ್ಟೆಂಬರ್ನ 6 ಮತ್ತು 11 ರಂದು ಪೂರ್ಣ ದಿನ ಸೇವೆ ಸ್ಥಗಿತವಾಗಲಿದೆ. ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಈ ವ್ಯತ್ಯಯ ಇರಲಿದೆ. ಆಗಸ್ಟ್ 24ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00ಕ್ಕೆ ಕೊನೆಗೊಳ್ಳಲಿದೆ. ಆಗಸ್ಟ್ 25ರಂದು ಬೆಳಿಗ್ಗೆ 5.00 ಕ್ಕೆ ಬದಲಾಗಿ 07.00ಕ್ಕೆ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ. ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ ಆಗಸ್ಟ್ 24 ಕೊನೆಯ ರೈಲು ಸೇವೆ ರಾತ್ರಿ 11.12 ಕ್ಕೆ ಹೊರಡಲಿದೆ. ಆಗಸ್ಟ್ 25 ರಂದು ಮೊದಲ ರೈಲು ಸೇವೆ ಬೆಳಿಗ್ಗೆ 5 ಕ್ಕೆ ಬದಲಾಗಿ 6 ಕ್ಕೆ ಪ್ರಾರಂಭವಾಗಲಿದೆ. ನೇರಳ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ಹೇಳಿದೆ.