ಬೆಂಗಳೂರು:- ಮೆಟ್ರೋ ಹೊಸ ಮಾರ್ಗಗಳಲ್ಲಿ ಕನ್ನಡ ವಾಯ್ಸ್ ಗಾಗಿ ಮೆಟ್ರೋ ಅಧಿಕಾರಿಗಳು ಹೊಸ ವಾಯ್ಸ್ಗಳ ಹುಡುಕಾಟ ನಡೆಸುತ್ತಿದ್ದಾರೆ. ಕನ್ನಡ ರೇಡಿಯೋ ಜಾಕಿಗಳು, ಆಯಂಕರ್ ಗಳು ಹಾಗೂ ಸಿಂಗರ್ ಗಳ ವಾಯ್ಸ್ ಗಳ ಸ್ಯಾಂಪಲ್ ಅನ್ನು ಮೆಟ್ರೋ ಅಧಿಕಾರಿಗಳು ಕೇಳಿದ್ದಾರೆ.
ಸದ್ಯ ಹಳದಿ ಮಾರ್ಗದ ಆರ್ವಿ ರೋಡ್ ಟೂ ಬೊಮ್ಮಸಂದ್ರ, ನಾಗಸಂದ್ರ ಟೂ ಮಾದಾವರ ಮಾರ್ಗ ಸಿದ್ದವಾಗಿದೆ. ಈ ಮಾರ್ಗಕ್ಕೂ ಅಪರ್ಣಾ ವಾಯ್ಸ್ ಹಾಕುವ ಬಗ್ಗೆ ಬಿಎಂಆರ್ಸಿಎಲ್ ಸಿದ್ದತೆ ನಡೆಸಿತ್ತು. ಅಪರ್ಣಾ ಮೃತಪಟ್ಟ ಹಿನ್ನೆಲೆ ಹೊಸ ವಾಯ್ಸ್ ಗಾಗಿ ಹುಡುಕಾಟ ನಡೆದಿದೆ. ಸಾಕಷ್ಟು ಜನರು ನಾವು ವಾಯ್ಸ್ ಕೊಡ್ತಿವಿ ಎಂದು ಮನವಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇನ್ನು ಮೆಟ್ರೋ ಹೊಸ ಮಾರ್ಗಗಳಿಗೆ ಯಾರ ವಾಯ್ಸ್ ಹಾಕಿದ್ರೆ ಸೂಕ್ತ ಎಂದು ಎಲ್ಲಾ ರೇಡಿಯೋ ಜಾಕಿ ಮತ್ತು ಕನ್ನಡ ಆಯಂಕರ್ ಹಾಗೂ ಸಿಂಗರ್ ವಾಯ್ಸ್ ಗಳನ್ನು ಸರ್ಚ್ ಮಾಡುತ್ತಿರುವ ನಮ್ಮ ಮೆಟ್ರೋ ಅಧಿಕಾರಿಗಳು, ಸದ್ಯ ಉದ್ಘಾಟನೆ ಆಗಿರೋ ಎಲ್ಲಾ ಮಾರ್ಗದಲ್ಲಿ ಅಪರ್ಣಾ ಧ್ವನಿ ಬದಲಾಗೋದಿಲ್ಲ. ಚಲ್ಲಘಟ್ಟ-ವೈಟ್ ಫೀಲ್ಡ್, ಸಿಲ್ಕ್ ಇನ್ಸ್ಟಿಟ್ಯೂಟ್ – ನಾಗಸಂದ್ರ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಯಲಿದೆ.
ಅಪರ್ಣಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಧ್ವನಿಯನ್ನು ಸವಿಯುತ್ತಾ ಪ್ರಯಾಣಿಸಿ ಎಂದಿದೆ ನಮ್ಮ ಮೆಟ್ರೋ. ಈ ಬಗ್ಗೆ ಪ್ರಯಾಣಿಕರು ಹೊಸ ಮಾರ್ಗದಲ್ಲಿ ಅಪರ್ಣಾ ಅವರ ಧ್ವನಿಯನ್ನು ನಾವು ಮಿಸ್ ಮಾಡಿಕೊಳ್ತಿವಿ ಮತ್ತು ಹೊಸ ಮಾರ್ಗದಲ್ಲಿ ಕನ್ನಡದವ್ರಿಗೆ ವಾಯ್ಸ್ ನೀಡಲು ಅವಕಾಶ ನೀಡಬೇಕು. ಕನ್ನಡ ಟ್ರಾನ್ಸ್ಲೆಟ್ ಮಾಡುವ ವಾಯ್ಸ್ ಗಳನ್ನು ಪ್ಲೇ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಪ್ರತಿದಿನ ಮೆಟ್ರೋ ರೈಲಿನಲ್ಲಿ ಅಪರ್ಣಾ ಅವರ ಧ್ವನಿಯನ್ನು ಕೇಳಿ ಸಂತೋಷ ಪಡುತ್ತಿದ್ದ ಕನ್ನಡಿಗರಿಗೆ ಮೆಟ್ರೋದ ಮುಂದಿನ ಹೊಸ ಮಾರ್ಗದಲ್ಲಿ ಅವರ ಧ್ವನಿಯನ್ನು ಮಿಸ್ ಮಾಡಿಕೊಳ್ಳೋದಂತೋ ಗ್ಯಾರಂಟಿ ಎಂದು ಹೇಳಲಾಗಿದೆ.