ರಾಜ್ಯದಲ್ಲಿ ಬೆಲೆ ಏರಿಕೆ ಹೆಚ್ಚಳದ ಪರ್ವ ಮುಂದುವರೆದಿದೆ, ಪ್ರತಿ ವಸ್ತುಗಳ ಬೆಲೆ ನಾ ಮುಂದು ನಾ ಮುಂದು ಎಂದು ಹೋಗುತ್ತಲೇ ಇದೆ..ಇತ್ತೀಚೆಗಷ್ಟೇ ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಳ ಮಾಡಿ ಶಾಕ್ ಕೊಟ್ಟಿದ್ದ ರಾಜ್ಯ ಸರ್ಕಾರ, ಈಗ ಮತ್ತೊಂದು ಶಾಕ್ ನೀಡಿದೆ.
ರಾಜ್ಯದಲ್ಲಿ ಹಣ್ಣು, ತರಕಾರಿ, ಗ್ಯಾಸ್ ಇನ್ನಿತರ ದಿನಬಳಕೆ ವಸ್ತುಗಳ ಹಣ ದುಬಾರಿಯಾಗುತ್ತಲೇ ಇದೆ.
ದುಬಾರಿ ದುನಿಯಾದಲ್ಲಿ ಹೇಗೆ ಜೀವನ ನಡೆಸಬೇಕು ಎಂದು ಜನರು ಕಂಗಾಲಾಗಿದ್ದಾರೆ. ಇದರ ನಡುವೆ ಇದೀಗ ಹಾಲಿನ ದರವೂ ಹೆಚ್ಚಾಗಿದೆ.ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆಯೇ ಈಗ ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಯೆಸ್, ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್’ಗೆ 2.10 ರೂ ಹೆಚ್ಚಳ ಮಾಡಿ ಕೆಎಂಎಫ್ ಆದೇಶಿಸಿದ್ದು ಪರಿಷ್ಕೃತ ದರ ಇಂದಿನಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ತಿಳಿಸಿದೆ.
ನಂದಿನಿಯ ವಿವಿಧ ಹಾಲಿನ ಉತ್ಪನ್ನಗಳ ಪರಿಷ್ಕೃತ ಬೆಲೆಗಳು ಯಾವ ರೀತಿ ಇದೆ ಎಂದು ನೋಡುವುದಾದರೆ:
- ನೀಲಿ ಪ್ಯಾಕೆಟ್ ಹಾಲು (ಟೋನ್ಡ್ ಮಿಲ್ಕ್): 42 ರಿಂದ 44 ರೂ.
- ನೀಲಿ ಪ್ಯಾಕೆಟ್ (ಹೋಮೊಜೆನೈಸ್ಡ್ ಟೋನ್ಡ್ ಹಾಲು): 43 ರಿಂದ 45 ರೂ.
- ಕಿತ್ತಳೆ ಪ್ಯಾಕೆಟ್ ಹಾಲು (ಹೋಮೊಜೆನೈಸ್ಡ್ ಹಸುವಿನ ಹಾಲು): 46 ರಿಂದ 48 ರೂ.
- ಕಿತ್ತಳೆ ವಿಶೇಷ ಹಾಲು: 48 ರಿಂದ 50 ರೂ.
- ಶುಭಂ ಹಾಲು: 48 ರಿಂದ 50 ರೂ.
- ಸಮೃದ್ಧಿ ಹಾಲು: 51 ರಿಂದ 53 ರೂ.
- ಶುಭಂ (ಹೋಮೊಜೆನೈಸ್ಡ್ ಟೋನ್ಡ್ ಹಾಲು): 49 ರಿಂದ 51 ರೂ.
- ಶುಭಂ ಚಿನ್ನದ ಹಾಲು: 49 ರಿಂದ 51 ರೂ.
- ಶುಭಂ ಡಬಲ್ ಟೋನ್ಡ್ ಹಾಲು: 41 ರಿಂದ 43 ರೂಇತ್ತ ಸಿಎಂ ಸಿದ್ದರಾಮಯ್ಯಗೆ ಹಾಲಿನ ದರದ ಬಗ್ಗೆ ಒತ್ತಡದ ಜಾಸ್ತಿಯಾಗಿದ್ದು, ಹಾಲಿನ ದರ ಏರಿಕೆ ಮಾಡುವುದು ಸರ್ಕಾರ ಅಲ್ಲ, ಕೆಎಂಎಫ್ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಹಾಲಿನ ದರ ಹೆಚ್ಚಳ ಬಗ್ಗೆ ಚರ್ಚೆ ಮಾಡ್ತೀನಿ . ಬೇರೆ ರಾಜ್ಯಗಳ ಪರಿಸ್ಥಿತಿ ನೋಡಿಕೊಂಡು ದರ ಹೆಚ್ಚಳ ಮಾಡ್ತಾರೆಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.