ಬೆಂಗಳೂರು: ದುನಿಯಾ ದಿನೇ ದಿನೇ ಕಾಸ್ಟ್ಲಿ ಆಗ್ತಿದೆ.ಜನ ಸಾಮಾನ್ಯರಂತೂ ಅಂತೂ ಬದುಕೋಕೆ ಆಗ್ತಿಲ್ಲ.ಪೆಟ್ರೋಲ್,ಡಿಸೇಲ್ ,ಎಲ್ಪಿಜಿ ಗ್ಯಾಸ್ ,ಕರೆಂಟ್ ಬಿಲ್ ಗಗನಕ್ಕೇರಿದೆ.ಇಷ್ಟು ಸಾಲದು ಅಂತ ನಾಳೆಯಿಂದ ಹಾಲು, ಮೊಸರು, ದುಬಾರಿಯಾಗ್ತಿದೆ.
ಕಾಫಿಗೂ ಹಾಲು,ಟೀ ಗೂ ಹಾಲು,ಅಭಿಷೇಕಕ್ಕೂ ಹಾಲು,ಅಡುಗೆ ಮನೆಯಲ್ಲಿ ಹಾಲು ಇಲ್ಲದೆ ದಿನವೇ ನಡೆಯಲ್ಲ.ಇನ್ನೂ ಮೊಸರು ಮಜ್ಜಿಗೆ ಅಂತೂ ಬೇಕೇ ಬೇಕು.ನಿತ್ಯ ಬದುಕಿಗೆ ತೀವ್ರ ಅಗತ್ಯವಾಗಿರುವ ಹಾಲು- ಮೊಸರು ದರ ನಾಳೆಯಿಂದ ಪ್ರತಿ ಲೀಟರ್ ಮೂರು ರೂಪಾಯಿ ಏರಿಕೆಯಾಗ್ತಿದೆ..ಹೌದು.ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರೋ ರಾಜ್ಯದ ಜನತೆಗೆ ಶಾಕ್ ಮೇಲೆ ಶಾಕ್ ಕಾಡ್ತಾನೇ ಇದೆ.ಶ್ರೀಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಾ ಇಲ್ಲ.ಎಲ್ಲಾವೂ ತುಂಬಾನೇ ಕಾಸ್ಟ್ಲಿ.ಆದರೆ ಕಳೆದ ಕೆಲ ದಿನದಿಂದ ಹಾಲು,ಮೊಸರು ದರ ಏರಿಕೆಗೆ ತಡೆ ಹಿಡಿದ್ದ ಸರ್ಕಾರ ಇದೀಗ ಅಳೆದು ತೂಗಿ ದರ ಪರಿಷ್ಕರಣೆ ಗ್ರೀನ್ ಸಿಗ್ನಲ್ ನೀಡೇಬಿಟ್ಟಿದೆ.
ಹಾಲಿನ ದರ ಪ್ರತಿ ಲೀಟರ್ ಗೆ 5 ರೂ ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ಆದರಂತೆ ಸರ್ಕಾರ ಮನವಿ ಆಲಿಸಿ ಪ್ರತಿ ಲೀಟರ್ ಗೆ 3 ರೂಪಾಯಿ ಆಗಸ್ಟ್ ಒಂದರಿಂದ ಅನ್ವಯವಾಗುಂತೆ ದರ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು.ಹೀಗಾಗಿ ನಾಳೆಯಿಂದ ಹಾಲು- ಮೊಸರು ದರ ಹೆಚ್ಚಳಕ್ಕೆ ಕೆಎಂಎಫ್ ಮುಂದಾಗಿದೆ. ಹಾಲಿ ದರ ಗ್ರಾಹಕರಿಗೆ ಕಹಿ ಸುದ್ದಿ ಆದ್ರೆ, ಹಾಲು ಉತ್ಪಾದಕರಿಗೆ ಬಂಪರ್ ನೀಡಲಾಗಿದೆ. ನಷ್ಟದ ನೆಪವೊಡ್ಡಿ, ರೈತರಿಗೆ ಲಾಭ ನೀಡ್ತೀವಿ ಎಂಬ ಉದ್ದೇಶದಿಂದ ಕೆ.ಎಂ.ಎಫ್ ಹಾಲಿನ ದರ ಹೆಚ್ಚಳ ಮಾಡ್ತಿದೆ.. ಈಗಾಗ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಕ್ಕೆ ದಿನನಿತ್ಯ ಉಪಯೋಗಿಸುವ ದವಸ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಇದೀಗ ನಂದಿನ ಹಾಲು, ಮೊಸರು ದರ ನಾಳೆಯಿಂದ ಏರಿಕೆಯಾಗ್ತಿದೆ
ಯಾವೆಲ್ಲಾ ಹಾಲಿನ ಮಾದರಿಗಳು ಎಷ್ಟೆಷ್ಟು ಹೆಚ್ಚಳ..
ಹಾಲಿನ ಮಾದರಿ – ಹಳೆಯ ದರ – ಹೊಸ ದರ
ಟೋನ್ಡ್ ಹಾಲು – 39 – 42
ಹೋಮೋಜಿನೈಸ್ಡ್ ಟೋನ್ಡ್ ಹಾಲು 40-43
ಹೋಮೋಜಿನೈಸ್ಡ್ ಹಸುವಿನ ಹಾಲು – 44 – 47
ಸ್ಪೆಷಲ್ ಹಾಲು – 45 – 48
ಮೊಸರು ಪ್ರತಿ ಕೆಜಿಗೆ – 47- 50
ಮೊದಲೆ ದೈನಂದಿನ ದಿನಬಳಕೆ ವಸ್ತುಗಳ ಹೆಚ್ಚಳದಿಂದ ಸಂಕಷ್ಟಕ್ಕೆ ಈಡಾಗಿರುವ ಸಾರ್ವಜನಿಕರು ಈ ನಡುವೆ ಹಾಲಿನ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಒಂದು ಕಡೆ ಹಾಲಿನ ದರ ಹೆಚ್ಚಳದ ಜೊತೆಗೆ ಹೋಟೆಲ್ ಗಳಲ್ಲೂ ಊಟ ತಿಂಡಿ.ಕಾಫಿ ಟೀ ದರವೂ ನಾಳೆಯಿಂದ ಹೆಚ್ಚಳವಾಗ್ತಿದೆ. ಒಟ್ಟಿನಲ್ಲಿ ಕೆಎಂಎಫ್ ನಷ್ಟ ಆಗಿದ್ದೇವೆ ಅಂತ ಹೇಳಿ ರಾಜ್ಯದ ಮಂದಿಗೆ ದರ ಏರಿಕೆಯ ಶಾಕ್ ನೀಡಲಾಗಿದೆ.