ಬೆಂಗಳೂರು: ಯಲಹಂಕ ನಗರ ಯೋಜನೆ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿರುವ (BBMP) ಗಂಗಾಧರಯ್ಯ ಅವರ (Gangadharaiah) ಮೂರು ಮನೆಗಳ ಮೇಳೆ ಇಂದು ಬೆಳಿಗ್ಗೆ (Lokayukta Raid) ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು (Bengaluru). ಈ ವೇಳೆ ಕಂತೆ ಕಂತೆ ನೋಟುಗಳು ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ (Gold jewelery worth millions) ಮತ್ತಿತರ ಆಸ್ತಿ ಪತ್ರಗಳು ಮತ್ತು ದಾಖಲೆ ಪತ್ರಗಳು ಪತ್ತೆಯಾಗಿವೆ.
ಯಲಹಂಕದ ನಾಗಶೆಟ್ಟಿಹಳ್ಳಿ, ಮಹಾಲಕ್ಷ್ಮೀ ಬಡಾವಣೆ ಹಾಗೂ ನಂದಿನಿಬಡಾವಣೆಗಳಲ್ಲಿರುವ ಮೂರು ಮನೆಗಳ ಮೇಲೆ ಇಂದು ಮುಂಜಾನ್ ಎಸ್ಪಿ ಅಶೋಕ್ ನೇತೃತ್ವದ ಲೋಕಾಯುಕ್ತ (Lokayukta Raid) ಪೊಲೀಸರ ತಂಡ ದಿಢೀರ್ ದಾಳಿ ನಡೆಸಿತು. ದಾಳಿ ಸಂದರ್ಭದಲ್ಲಿ ಮನೆಯಲ್ಲಿ ಕಂತೆ ಕಂತೆಯಾಗಿ ಕಟ್ಟಿಟ್ಟಿದ್ದ 80 ಲಕ್ಷ ನಗದು, ವಿದೇಶಿ ಕರೆನ್ಸಿಗಳು, ಐವತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಮತ್ತಿತರ ಆಸ್ತಿಪತ್ರಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಗಂಗಾಧರಯ್ಯ ಮನೆಯಲ್ಲಿ ಸಿಕ್ಕ ಚಿನ್ನಾಭರಣ ನಗದು, ಬೆಲೆಬಾಳುವ ಬಟ್ಟೆಗಳನ್ನು ಕಂಡು ಲೋಕಾಯುಕ್ತ ಪೊಲೀಸರೆ ಶಾಕ್ ಆಗಿದ್ದಾರೆ. ಗಂಗಾಧರಯ್ಯ(Gangadharaiah) ಬಾರಿ ವಂಚನೆ ಮಾಡಿ ಕೋಟಿ ಕೋಟಿ ಅಕ್ರಮ ಸಂಪತ್ತು ಸಂಪಾದಿಸಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಈ ದಾಳಿ ನಡೆಸಲಾಗಿದ್ದು, ಅವರ ಮನೆಯಲ್ಲಿ ಪತ್ತೆಯಾಗಿರುವ ಕೋಟಿ ಕೋಟಿ ಮೌಲ್ಯದ ಅಕ್ರಮ ಸಂಪತ್ತಿನ ದಾಖಲೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.