ಸಚಿವ ಅಶ್ವಥ್ ನಾರಾಯಣ್ ಕಂಡ್ರೆ ಕಾಂಗ್ರೆಸ್ ಗೆ ಹೊಟ್ಟೆ ಉರಿ: ಸಂಸದ ಪಿ.ಸಿ.ಮೋಹನ್

ರಾಜಕೀಯ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವಥ್​​ ನಾರಾಯಣ್ ಕಂಡ್ರೆ ಕಾಂಗ್ರೆಸ್​ಗೆ ಹೊಟ್ಟೆ ಉರಿ, ಸಮಾಜ, ಸಮುದಾಯದಲ್ಲಿ ಬೆಳೆಯುತ್ತಿದ್ದಾರೆ ಅನ್ನೋ ಹೊಟ್ಟೆಕಿಚ್ಚು ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್​​​​​ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾ ಡಿದ ಬಿಜೆಪಿ ಸಂಸದ ಪಿ.ಸಿ.ಮೋಹನ್​​​​​, ಅಶ್ವಥ್​ ನಾರಾಯಣ್​ ಬೆಳವಣಿಗೆಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ, ಚಿಲುಮೆ ಪ್ರಕರಣದಲ್ಲಿ ಸುಖಾಸುಮ್ಮನೆ ಆರೋಪ ಮಾಡ್ತಿದ್ದಾರೆ.

ವೋಟರ್​​​ ಕಾರ್ಡ್​ಗಳನ್ನು ಡಿಲೀಟ್​ ಮಾಡೋದು ಜನರಲ್​ ಪ್ರಕ್ರಿಯೆ ,ಎರಡು ಕಡೆ ಇರುವ ಕಾರ್ಡ್​ಗಳನ್ನು ರದ್ದು ಮಾಡ್ತಾರೆ. ಅದೇ ರೀತಿ ವೋಟರ್​​ ಲಿಸ್ಟ್​ಗೆ ಸೇರಿಸುವುದೂ ನಡೆಯುತ್ತಿದೆ. ಈಗಾಗಲೇ ಸಿಎಂ ತನಿಖೆ ಮಾಡಿ ಕ್ರಮಕ್ಕೂ ಸೂಚನೆ ಕೊಟ್ಟಿದ್ದಾರೆ, ಎಲ್ಲದಕ್ಕೂ ಅಶ್ವಥ್​​ ನಾರಾಯಣ್​ ಎಳೆದು ತರುವುದು ಕಾಂಗ್ರೆಸ್ ಚಾಳಿ ಎಂದು ಕಾಂಗ್ರೆಸ್​ ವಿರುದ್ಧ ಬೆಂಗಳೂರು ಸೆಂಟ್ರಲ್​​​ ಸಂಸದ ಪಿ.ಸಿ.ಮೋಹನ್​​ ಗುಡುಗಿದ್ದಾರೆ.