ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕಾರ್ ಕಾರ್ಯಕ್ರಮವೊಂದರಲ್ಲಿ ಶೂ ಹಾಕಿಕೊಂಡೆ ಆರತಿ ಪಡೆದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅರಸನಘಟ್ಟ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ಉದ್ಘಾಟನೆ ಮಾಡುವ ವೇಳೆ ಈ ಘಟನೆ ನಡೆದಿದೆ.
ಉದ್ಘಾಟನೆ ವೇಳೆ ಪೂಜಾ ಕಾರ್ಯಕ್ರಮಮದಲ್ಲಿ ಭಾಗವಹಿಸಿದ್ದರು. ದೇವರಿಗೆ ಪೂಜೆ ಸಲ್ಲಿಸಿ ಆರತಿ ನೀಡಲಾಗಿದೆ. ಈ ವೇಳೆ ಸಚಿವ ಡಿ.ಸುಧಾಕರ್ ಚಪ್ಪಲಿ ಧರಿಸೇ ಆರತಿ ತೆಗೆದುಕೊಂಡು ತಟ್ಟೆಗೆ ಕಾಣಿಕೆ ಹಾಕಿದ್ದಾರೆ.
ಅವರ ಪಕ್ಕದಲ್ಲಿ ಇದ್ದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಚಂದ್ರಪ್ಪ ಚಪ್ಪಲಿ ಬಿಚ್ಚಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆದರೆ ಸಚಿವರು ಮಾತ್ರ ಪೂಜೆ ವೇಳೆ ಚಪ್ಪಲಿ ತೆಗೆಯದೇ ಇರುವುದು ಟೀಕೆಗೆ ಕಾರಣವಾಗಿದೆ.
