ಬೆಂಗಳೂರು: ಸಚಿವ ಜಮೀರ್ ಆಪ್ತ ಹಾಗೂ ಕಾಂಗ್ರೆಸ್ ನಾಯಕರೂ ಆಗಿರುವ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಸಿ ವೇಣುಗೋಪಾಲ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ (IT Raid) ನಡೆಸಿದೆ.
ಇಲ್ಲಿನ ಜೆ.ಪಿನಗರದಲ್ಲಿರುವ ವೇಣುಗೋಪಾಲ್ (MC Venugopal) ಅವರ ಮನೆ ಮೇಲೆ 15 ಅಧಿಕಾರಿಗಳ ತಂಡ ದಾಳಿ ನಡೆಸಿದೆ.
3 ಇನ್ನೋವಾ ಕಾರಿನಲ್ಲಿ ಬಂದಿದ್ದ ಐಟಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದಲೇ ದಾಳಿ ನಡೆಸಿ, ವಿವಿಧ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.ಬೆಳಗ್ಗೆಯಿಂದ ಸ್ವಲ್ಪವೂ ಬಿಡುವು ಮಾಡಿಕೊಳ್ಳದ ಅಧಿಕಾರಿಗಳು, ಅಲ್ಲಿಗೇ ತಿಂಡಿ ತರಿಸಿಕೊಂಡು ಕೆಲಸ ಮುಂದುವರಿಸಿದ್ದಾರೆ. ವಿವಿಧ ದಾಖಲೆ ಪತ್ರಗಳನ್ನ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಮನೆಯಲ್ಲೇ ಇದ್ದ ವೇಣುಗೋಪಾಲ್ ಅಧಿಕಾರಿಗಳಿಗೆ ಸಹಕರಿಸಿದ್ದಾರೆ.