ಬೆಂಗಳೂರು: ಹಾಲು ಉತ್ಪಾದಕರಿಗೆ ಸಹಾಯಧನ ಹೆಚ್ಚಿಸಲು ಚಿಂತನೆ ಮಾಡಲಾಗಿತ್ತಿದೆ ಎಂದು ಪರೋಕ್ಷವಾಗಿ ಹಾಲಿನ ದರ ಏರಿಕೆ ಬಗ್ಗೆ ಮೈಸೂರಿನಲ್ಲಿ ಸಹಕಾರ ಖಾತೆ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಹಾಲಿನ ದರ ಏರಿಕೆ ಎಂದ ಕೂಡಲೇ ಎಲ್ಲರೂ ಗಾಬರಿಯಾಗುತ್ತಾರೆ ಎಂದಿದ್ದಾರೆ.
ದರ ಏರಿಕೆ ಎಂದರೆ ಎರಡು ರೀತಿ ಇದೆ. ಒಂದು ಹಾಲು ಉತ್ಪಾದಕರಿಗೆ ಹೆಚ್ಚಿನ ದರವನ್ನು ಕೊಡುವುದು. ಇನ್ನೊಂದು ಖರೀದಿ ಮಾಡುವವರಿಗೆ ದರ ಜಾಸ್ತಿ ಮಾಡುವುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಎರಡು ದರ ಕಡಿಮೆ. ಹಾಲು ಉತ್ಪಾದಕರಿಗೆ ನಾವು ಸಹಾಯ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಯಾರಿಗೂ ಹೊರೆಯಾಗದಂತೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.