ಬೆಂಗಳೂರು ;– ಶಕ್ತಿ ಯೋಜನೆ ಯಶಸ್ಸಿನ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಡಿಸಿದ್ದಾರೆ.
ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ಬರುವವರ ಸಂಖ್ಯೆ ದ್ವಿಗುಣವಾಗಿದೆ. ಜನರ ಅಂತರಾಳದಲ್ಲಿ ಪೂಜಿಸುವ, ಪ್ರೀತಿಸುವ ಭಾವನೆ ಸಬಲಗೊಳಿಸಲಾಗಿದೆ. ಹಿಂದುತ್ವವು ಜನರನ್ನು ಧರ್ಮದ ದಾರಿಯಲ್ಲಿ ಸಾಗಿಸುವ ಬದಲಿಗೆ ಸಮಾಜವನ್ನು ಇಬ್ಭಾಗಿಸುವ ದ್ವೇಷ ಹಾಗೂ ಅಸೂಯೆಯ ಕೂಪಕ್ಕೆ ತಳ್ಳಿತ್ತು. ದ್ವೇಷದಿಂದ ಜನರನ್ನು ದೇವರ ಬಳಿ ಕರೆದೊಯ್ಯಲು ಸಾಧ್ಯವಿಲ್ಲ.
ಆದರೆ ಪ್ರೀತಿ ಹಾಗೂ ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆಯು ಜನರನ್ನು ತಮ್ಮ ಪೂಜ್ಯ ಸ್ಥಳಗಳಿಗೆ ಮತ್ತಷ್ಟು ಹತ್ತಿರ ಮಾಡಿದೆ. ದೇವಸ್ಥಾನಗಳ ಸುತ್ತಲಿನ ಸಣ್ಣ ವ್ಯಾಪಾರಿಗಳಿಗೆ ನೇರ ಅನುಕೂಲ ಆಗಲಿದೆ. ಅಲ್ಲಿನ ಆರ್ಥಿಕ ಪ್ರಗತಿಯ ವೇಗ ಕೂಡ ದ್ವಿಗುಣಗೊಳ್ಳಲಿದೆ. ದ್ವೇಷ ಕೇಂದ್ರಿತ ಅಧರ್ಮವನ್ನು ಸೋಲಿಸಿ ಪ್ರೀತಿ ಹಾಗೂ ಸಹಬಾಳ್ವೆ ಕೇಂದ್ರಿತ ಧರ್ಮ ಗೆಲ್ಲಿಸಲು ಹೆಜ್ಜೆ ಇಟ್ಟಿದ್ದೇವೆ. ಸಹಬಾಳ್ವೆ ಕೇಂದ್ರಿತ ಧರ್ಮ ಗೆಲ್ಲಿಸಲು ‘ಶಕ್ತಿ’ಯುತ ಹೆಜ್ಜೆ ಇಟ್ಟಿದ್ದೇವೆ ಎಂದು ಶಕ್ತಿ ಯೋಜನೆ ಯಶಸ್ಸಿನ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.