ಕಲಘಟಗಿ (ಧಾರವಾಡ): ತಾಲೂಕಿನಲ್ಲಿ ಯಾವುದೇ ಇಲಾಖೆ ತೆಗೆದುಕೊಳ್ಳಿ ಆಯಾ ಇಲಾಖೆಯ ಮುಂದೆ ಸರಿಯಾದ ರಸ್ತೆ ಇಲ್ಲ ಇದರ ಜೊತೆಗೆ ಸಿಬ್ಬಂದಿಗಳಿಗೆ ಗಬ್ಬೆದ್ದು ನಾರುತ್ತಿರುವ ಹಳೆಯ ಶೌಚಾಲಯಗಳೇ ಗತಿ.
ಸುಸರ್ಜಿತವಾದ ಕಟ್ಟಡಗಳು ಇದ್ದರೂ ಬಳಕೆ ಮಾಡುವ ಶೌಚಾಲಯಗಳು ಹಾಳಾಗಿ ಹೋಗಿವೆ.
ಕಲಘಟಗಿ ತಾಲೂಕು ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದೆ.
ಇಲ್ಲಿನ ಸಾಕಷ್ಟು ಸರ್ಕಾರಿ ಇಲಾಖೆ ಕಚೇರಿಗಳಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯದಿಂದ ಸಂಪೂರ್ಣ ವಂಚಿತವಾಗಿದೆ.
ಕಚೇರಿ ಕಟ್ಟಡಗಳ ಮಾತ್ರ ಹೆಸರಿಗೆ ಮಾತ್ರ ಇವೆ ಕೆಲವೊಂದು ಬಾಡಿಗೆ ಆಧಾರದ ಇಲಾಖೆಗಳು ಕೆಲಸ ನಿರ್ವಹಿಸುತ್ತಿವೆ. ಇನ್ನು ಅಲ್ಲಿಯ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಶೌಚಾಲಯ ಮಾತ್ರ ಇಲ್ಲದೆ ಮರೀಚಿಕೆಯಾಗಿದೆ. ತಾಲೂಕಿನ ಸರ್ಕಾರದ ಕಚೇರಿಗಳಿಗೆ ಹೋಗಬೇಕಾದರೆ ಸರಿಯಾದ ರಸ್ತೆ ನಿರ್ಮಾಣವಾಗಿಲ್ಲ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸುಸರ್ಜಿತವಾದ ಶೌಚಾಲಯ ಇದ್ದು ಇಲ್ಲದಂತಾಗಿದೆ.
ಸರ್ಕಾರ ಇಲಾಖೆಯಲ್ಲಿ ಶೇಕಡಾ 50 ರಷ್ಟು ಪುರುಷರು ಸಮನಾಗಿ ಮಹಿಳೆಯರು ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಮಹಿಳೆಯರು ನಿತ್ಯ ಬಳಕೆ ಮಾಡುವ ಶೌಚಾಲಯ ಸುಸರ್ಜಿತವಾಗಿ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿ ಸಿಬ್ಬಂದಿಗಳು ಇದ್ದಾರೆ.
ಪ್ರತಿಯೊಬ್ಬ ಜನಪ್ರತಿನಿಧಿ ಹಾಗೂ ಮಹನೀಯರು ತಾಲೂಕು ಅಭಿವೃದ್ಧಿ ಬಗ್ಗೆ ಹೇಳುವುದಾಗಿದೆ ಹೊರತು ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಹೀಗೆ ಆದರೆ ಅಭಿವೃದ್ಧಿ ಮಾತ್ರ ಶೂನ್ಯ ಯಾವುದಾದರೂ ಸಾರ್ವಜನಿಕರು ಕೆಲಸಕ್ಕೆ ಕಚೇರಿ ಮುಂದೆ ಹೋದರೆ ಬಿದ್ದು ಕೈ ಕಾಲು ಮುರಿದಂತೆ ಗ್ಯಾರಂಟಿ ಆಗೈತಿ ಅನ್ನುತ್ತಾರೆ ಸಾರ್ವಜನಿಕರು. ಸರಕಾರಗಳು ಸ್ವಚ್ಛತೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರೆ ಅದು ಕೇವಲ ಪ್ರಚಾರಕ್ಕೆ ಮಾತ್ರ ಮೀಸಲಾಗಿದೆ.