ಹುಬ್ಬಳ್ಳಿ: ಮನೆ ಮುಂದೆ ನಿಲ್ಲಿಸಿದ ಆಟೋಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಘಟನೆ ಹಳೇಹುಬ್ಬಳ್ಳಿಯ ನೇಕಾರನಗರದ ಮಹಾಲಕ್ಷ್ಮೀ ಕಾಲೋನಿಯಲ್ಲಿ ನಡೆದಿದೆ. ವೀರಣಗೌಡ ಪಾಟೀಲ್ ಎಂಬುವವರಿಗೆ ಸೇರಿದ ಆಟೋಗೆ ಬೆಂಕಿಗೆ ಸುಟ್ಟು ಕರಕಲಾಗಿದೆ.
ವೀರಣಗೌಡ ಪಾಟೀಲ್ ಪ್ರತಿದಿನದಂತೆ ಬಾಡಿಗೆ ಹೊಡೆದು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದರು. ಆದರೆ ಕಿಡಿಗೇಡಿಗಳು ಮಧ್ಯರಾತ್ರಿ ಬೆಂಕಿ ಹಚ್ಚಿದ್ದಾರೆ. ಆಟೋಗೆ ಬೆಂಕಿ ಹತ್ತಿದ್ದನ್ನು ನೋಡಿದ ಸ್ಥಳೀಯರು ಮಾಲೀಕನಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ವೀರಣಗೌಡ ಪಾಟೀಲ್ ಸಾರ್ವಜನಿಕರೊಂದಿಗೆ ಸೇರಿ ಬೆಂಕಿ ನಿಂದಿಸಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಆಟೋ ಸಂಪೂರ್ಣ ಸುಟ್ಟು ಕರಕಲಾಗಿದೆ.
ವೀರಣಗೌಡ ಪಾಟೀಲ್ ಮತ್ತು ಕುಟುಂಬಸ್ಥರು ಆಟೋ ದುಡಿಮೆಯನ್ನೇ ನಂಬಿದ್ದರು. ಆದರೆ ಕರಕಲಾಗಿದ್ದ ಆಟೋದಿಂದಾಗಿ ಈಗ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಹಳೇಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ