ಬೆಂಗಳೂರು: ಅದು ಬೈಕ್ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಕಿರಿಕ್.ಮಾತಿನ ಮೂಲಕವೇ ಬಗೆಹರಿಸಿಕೊಳ್ಳಬಹುದಿತ್ತು.ಆದ್ರೆ ಅದೇ ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ರಕ್ತ ಹರಿಸಿಬಿಟ್ಟಿದ್ರು.ಕಟಿಂಗ್ ಶಾಪ್ ನಲ್ಲಿ ಕೂತಿದ್ದವನನ್ನ ಅಟ್ಟಾಡಿಸಿ ಹೊಡೆದಿದ್ರು.ಚಾಕುವಿನಿಂದ ಚುಚ್ಚಿ ಅಟ್ಟಹಾಸ ಮೆರೆದಿದ್ದಾರೆ..ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ವಿಬೀಳುವಂತಿದೆ…
ಜನವರಿ 16 ರ ರಾತ್ರಿ 9.30 ರ ಸಮಯ..ಪಾದರಾಯನಪುರದ 9 ನೇ ಮುಖ್ಯ ರಸ್ತೆ..ಇದೇ ರಸ್ತೆಯಲ್ಲಿ ಬೈಕ್ ಪಾರ್ಕ್ ಮಾಡೊ ವಿಚಾರಕ್ಕೆ ಶಾಹಿದ್ ಅಹಮ್ಮದ್ ಮತ್ತು ತಬ್ರೇಜ್ ನದೀಂ, ಗುಡ್ಡು, ವಾಹೀಂ, ರಾಹಿಲ್ ರಿಯಾನ್, ರೋಷನ್, ಸಲೀಂ ಎಂಬುವರ ನಡುವೆ ಜಗಳವಾಗಿದೆ..ಸ್ಥಳೀಯರು ಸಮಾಧಾನ ಮಾಡಿ ಕಳಿಸಿದ್ರು..ಇನ್ನೇನು ಸಮಸ್ಯೆ ಬಗೆಹರಿತಲ್ಲ ಅಂತಾ ಅಲ್ಲೇ ಇದ್ದ ಕಟಿಂಗ್ ಶಾಪ್ ಗೆ ಶಾಹಿದ್ ಬಂದಿದ್ದ..15 ನಿಮಿಷದ ಬಳಿಕ ಮತ್ತೆ ಎಂಟ್ರಿ ಕೊಟ್ಟ ಗ್ಯಾಂಗ್ ಶಾಹಿದ್ ನನ್ನ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ..ಅಂಗಡಿಯಲ್ಲಿದ್ದವರು ಬಿಡಿಸೊ ಯತ್ನ ಮಾಡಿದ್ದಾದ್ರು ಪ್ರಯೋಜನ ಆಗ್ಲಿಲ್ಲ..ಅಲ್ಲೇ ಇದ್ದ ರೇಜರ್ ತೆಗೆದು ಹೊಟ್ಟೆಗೆ ಚುಚ್ಚೇ ಬಿಟ್ಟಿದ್ರು..ನಂತರ ಓಡಿಹೋದ ಶಾಹಿದ್ ಪ್ರಾಣ ಉಳಿಸಿಕೊಂಡೊದ್ದ..ಇನ್ನೂ ಘಟನೆಗೆ ಸಂಬಂಧಪಟ್ಟಂತೆ ಆರೋಪಿಗಳು ನನ್ನ ಬಳಿ ಹಣ ಕೇಳಿದ್ರು..ಇಲ್ಲ ಅಂದಿದ್ದಕ್ಕೆ ಹೊಡೆದು ಚಾಕುವಿನಿಂದ ಚುಚ್ಚಿದ್ದಾರೆ ಎಂದು ಶಾಹಿದ್ ಆರೋಪಿಸ್ತಿದ್ದಾನೆ..
ವಿಚಾರ ಗೊತ್ತಾಗ್ತಿದ್ದಂತೆ ಪೋಷಕರು ಗಾಬರಿಗೊಂಡಿದ್ರು..ಮಗನ ಸ್ಥಿತಿ ಕಂಡು ದಿಕ್ಕೇ ತೋಚದಂತೆ ಆಗಿದ್ರು…ಮನೆಗೆ ಆಧಾರ ಸ್ತಂಭವಾಗಿದ್ದ ಪುತ್ರನ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ್ರು..ಅದೃಷ್ಟವಶಾತ್ ಶಾಹಿದ್ ಪ್ರಾಣಾಪಾಯದಿಂದ ಪಾರಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾನೆ…ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಅಂತಾ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ
ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ..ವಿಚಾರಣೆ ಬಳಿಕ ಘಟನೆಗೆ ನಿಖರ ಕಾರಣ ಏನು ಅನ್ನೋದು ಗೊತ್ತಾಗಲಿದೆ