ಹ್ಯೂಸ್ಟನ್: ಟೆಕ್ಸಾಸ್ನಿಂದ ನಾಪತ್ತೆಯಾಗಿದ್ದ 6 ವರ್ಷದ ಬಾಲಕನೋರ್ವ ಮೃತಪಟ್ಟಿದ್ದು ಆತನ ಹೆತ್ತವರು ಅಮೆರಿಕದಿಂದ ಭಾರತಕ್ಕೆ ಪಲಾಯನ ಗೈದಿದ್ದಾರೆ. ಸದ್ಯ ಅವರ ಬಂಧನಕ್ಕೆ ಪ್ರಯತ್ನ ನಡೆದಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಣೆಯಾದ ಹುಡುಗನ ಹುಡುಕಾಟದ ವೇಳೆ ಆತನ ಮೃತ ದೇಹ ಪತ್ತೆಯಾಗಿದೆ ಎಂದು ಎವರ್ಮನ್ ಪೊಲೀಸ್ ಮುಖ್ಯಸ್ಥ ಕ್ರೇಗ್ ಸ್ಪೆನ್ಸರ್ ತಿಳಿಸಿದ್ದಾರೆ.
ಮಗುವನ್ನು ತೊರೆದು ಅಪಾಯಕ್ಕೆ ಸಿಲುಕಿದ್ದಕ್ಕಾಗಿ ತಾಯಿ ಸಿಂಡಿ ರೋಡ್ರಿಗಸ್ ಸಿಂಗ್ ಮತ್ತು ಅಶ್ರ್ದೀಪ್ ಸಿಂಗ್ ಅವರನ್ನು ಬಂಧಿಸಲು ನಾವು ಸಕ್ರಿಯರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಪರಾರಿಯಾದವರನ್ನು ಬಂಧಿಸಿ ಹಸ್ತಾಂತರಿಸಬೇಕೆಂದು ನಾವು ಭಾರತದ ಸರ್ಕಾರವನ್ನು ಕೋರಿದ್ದೇವೆ ಎಂದು ಹೇಳಿದ್ದಾರೆ. ಸಿಂಡಿಗೆ ಹತ್ತು ಮಕ್ಕಳಲ್ಲಿ ಆವಳಿ ಸೋದರಿಯರು ಮತ್ತು ಬಬ್ಬ ಪುತ್ರ ಸಾವನ್ನಪ್ಪಿದ್ದಾನೆ. ಮೂವರು ಅಜ್ಜಿಯರೊಂದಿಗೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ, ಆದರೆ ನೋಯೆಲ್ ಮತ್ತು ಇತರರು ತಮ್ಮ ತಾಯಿಯೊಂದಿಗೆ ಫೋರ್ಟ್ ವತರ್ನ ಉಪನಗರವಾದ ಎವರ್ಮನ್ನಲ್ಲಿನಲ್ಲಿ ವಾಸಿಸುತ್ತಿದ್ದರು.
ಕಳೆದ ಮಾರ್ಚ್ 20 ರಂದು ಟೆಕ್ಸಾಸ್ ಕುಟುಂಬ ಸೇವೆಗಳ ಇಲಾಖೆಯು ಎವಮ್ರ್ಯಾನ್ನಲ್ಲಿರುವ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾರ್ಚ್ 22 ರಂದು, ನೋಯೆಲ್ ಅವರ ತಾಯಿ, ಸಿಂಡಿ, ಅವರ ಪತಿ ಮತ್ತು ಆರು ಮಕ್ಕಳು ವಿಮಾನದ ಮೂಲಕ ಭಾರತಕ್ಕೆ ಪ್ರಯಾಣಿಸಿದರು ಎಂದು ಸ್ಪೆನ್ಸರ್ ತಿಳಿಸಿದ್ದಾರೆ.