ಕಾಣೆಯಾಗಿದ್ದ ಮಹಿಳೆಯ ಶವ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದ ದಕ್ಷಿಣದ ಪ್ರಾಂತ್ಯವಾದ ಸುಲಾವೇಸಿ ಬಳಿಯ ಕಾಲಾಪಾಂಗ್ ಎಂಬಲ್ಲಿ ನಡೆದಿದೆ.
ದೈತ್ಯ ಹೆಬ್ಬಾವೊಂದು ಫರಿದಾ ಎನ್ನುವ 49 ವರ್ಷದ ಮಹಿಳೆಯನ್ನು ಜೀವಂತವಾಗಿ ನುಂಗಿ ಹಾಕಿದೆ. ಈ ಬಗ್ಗೆ ಮಹಿಳೆಯ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ಇದೀಗ ಮಹಿಳೆಯ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ.
ಈ ಘಟನೆ ಇಂಡೋನೇಷ್ಯಾದ ಮಹಿಳೆ ಕಾಣೆಯಾಗಿರುವ ಬಗ್ಗೆ ಆಕೆಯ ಪತಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದಾಗ ಗ್ರಾಮದ ಅರಣ್ಯದಲ್ಲಿ 16 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಹೆಬ್ಬಾವು ಮುಂದೆ ಹೋಗದೇ ತೆವಳುವುದನ್ನು ಕಂಡು ಅರಣ್ಯ ಇಲಾಖೆಯವರು ಹೆಬ್ಬಾವಿನ ಹೊಟ್ಟೆ ಸೀಳಿದಾಗ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.
ಹೆಬ್ಬಾವುಗಳು ಮನುಷ್ಯರನ್ನು ಜೀವಂತವಾಗಿ ನುಂಗುವ ಘಟನೆ ತೀರಾ ಅಪರೂಪವಾದರೂ ಇಂಡೋನೇಷ್ಯಾದಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಲೆ ಇರುತ್ತದೆ.