ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಪ್ರೀರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿದ್ದ ನಟ ನಂದಮೂರಿ ಬಾಲಕೃಷ್ಣ ಮತ್ತೆ ಮತ್ತೆ ಸದ್ಯ ಸುದ್ದಿಯಲ್ಲಿದ್ದಾರೆ. ಅವರು ನಟಿ ಅಂಜಲಿ ಅವರನ್ನು ವೇದಿಕೆಯ ಮೇಲೆ ತಳ್ಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಾಲಕೃಷ್ಣ ಅವರಿದ್ದ ವೇದಿಕೆ ಮೇಲೆ ಮದ್ಯ ಇದೆ ಎಂದು ಹೇಳಲಾದ ಬಾಟಲಿ ಕಾಣಿಸಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಮಧ್ಯೆ ಬಾಲಯ್ಯ ಅಳಿಯ ಶ್ರೀಭರತ್ ನೀಡಿದ ಹೇಳಿಕೆಯೊಂದು ವೈರಲ್ ಆಗಿದೆ.
ಬಾಲಯ್ಯ ಅವರ ಅಳಿಯ ಶ್ರೀಭರತ್ ನೀಡಿದ ಹೇಳಿಕೆ ಈಗ ವೈರಲ್ ಆಗುತ್ತಿದೆ. ಸ್ಟ್ರೀಟ್ ಬೈಟ್ ಹೆಸರಿನ ಫುಡ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಶ್ರೀಭರತ್ ಮಾತನಾಡಿದ್ದು, ‘ನನ್ನ ಮಾವ ಕುಡಿಯೋ ಮದ್ಯದ ಹೆಸರು ಹೇಳಿದರೆ ಅದರ ಸ್ಟಾಕ್ ಬೆಲೆ ಏರಿಕೆ ಆಗುತ್ತದೆ’ ಎಂದಿದ್ದು, ಬಾಲಯ್ಯ ಯಾವ ಬ್ರ್ಯಾಂಡ್ ನ ಮಧ್ಯ ಸೇವಿಸುತ್ತಾರೆ ಎಂದು ಹೇಳಿದ್ದರು.
‘ನನ್ನ ಮಾವ ಮ್ಯಾನ್ಷನ್ ಹೌಸ್ ಬ್ರ್ಯಾಂಡ್ನ ಕುಡಿಯುತ್ತಾರೆ. ಅವರು ಬಿಸಿ ನೀರಿಗೆ ಮದ್ಯ ಸೇವಿಸಿ ಕುಡಿಯುತ್ತಾರೆ’ ಎಂದಿದ್ದರು ಶ್ರೀಭರತ್. ‘ನನ್ನ ಮಾವ ಯಾವಾಗಲೂ ಒಂದು ಬ್ಯಾಗ್ ಇಟ್ಟುಕೊಳ್ಳುತ್ತಾರೆ. ಅದರಲ್ಲಿ ಬಿಸಿ ನೀರು ಇರುತ್ತದೆ. ಅಮೆರಿಕ್ಕೆ ಹೋಗುವಾಗಲೂ ಅವರು ಈ ಬ್ಯಾಗ್ ತೆಗೆದುಕೊಂಡು ಹೋಗಿದ್ದರು’ ಎಂದು ಹೇಳಿದ್ದು ಸದ್ಯ ಈ ಹೇಳಿಕೆ ವೈರಲ್ ಆಗಿದೆ.
ಇತ್ತೀಚೆಗೆ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ಗೆ ತೆರಳಿದ್ದರು ಬಾಲಯ್ಯ. ವೇದಿಕೆ ಮೇಲೆ ಅವರು ಅಂಜಲಿ ಅವರನ್ನು ತಳ್ಳಿದ್ದರು. ಇದಕ್ಕೂ ಮೊದಲು ಅವರ ಕಾಲಿನ ಸಮೀಪ ನೀರಿನ ಬಾಟಲಿಯಲ್ಲಿ ಮದ್ಯದ ರೀತಿಯ ದ್ರವ ಇತ್ತು. ಕುಡಿದಿದ್ದರಿಂದಲೇ ಬಾಲಯ್ಯ ಈ ರೀತಿ ಮಾಡಿದ್ದರು ಎಂದು ಕೆಲವರು ಹೇಳಿದರು. ಇದನ್ನು ನಿರ್ದೇಶಕರು ತಳ್ಳಿ ಹಾಕಿದ್ದರು.