ಗದಗ: ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿರೋ ದೂರು ಬಂದಿರೋ ಹಿನ್ನೆಲೆ ಅಧಿಕಾರಿಗಳಿಗೆ ಸಚಿವ ಹೆಚ್.ಕೆ.ಪಾಟೀಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅನ್ನ ಭಾಗ್ಯ ಅಕ್ಕಿ ಕುರಿತು ಸಚಿವ ಹೆಚ್.ಕೆ.ಪಾಟೀಲ್ ನೇತೃತ್ವದಲ್ಲಿ ಗದಗನ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿತ್ತು. ಈ ವೇಳೆ ಅಧಿಕಾರಿಗಳಿಗೆ ಅಕ್ಕಿಯನ್ನು ತೋರಿಸಿ ಇಂತಹ ಅಕ್ಕಿ ಜನ ತಿನ್ನಲ್ಲ ಭಯ ಪಡ್ತಾರೆ. ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿರೋ ದೂರು ಬಂದಿದೆ.
ನನಗೆ ಗ್ರಾಹಕರೊಬ್ಬರು ಅಕ್ಕಿ ತಂದು ದೂರು ನೀಡಿದ್ದಾರೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಈ ವೇಳೆ ಸಾರವರ್ಧಿತ ಅಕ್ಕಿಯನ್ನು ಪ್ಲಾಸ್ಟಿಕ್ ಅಕ್ಕಿ ಅಂತಾ ಕನ್ಪ್ಯೂಸ್ ಆಗಿದ್ದರು. ಆಹಾರ ಇಲಾಖೆಯ ಅಧಿಕಾರಿ ಗಂಗಪ್ಪ ಅವರಿಂದ ಸಚಿವರು ಅಕ್ಕಿ ಕುರಿತು ಮಾಹಿತಿ ಪಡೆದರು. ಆದ್ರೆ ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ ಅಂತ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.