ಬೆಂಗಳೂರು: ಇಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಮಾಡಾಳು ಅವರು ನಿನ್ನೆ ನಿರೀಕ್ಷಣಾ ಜಾಮೀನು ಸಿಕ್ಕಿದ ಅರ್ಧಗಂಟೆಯಲ್ಲಿ ಚನ್ನಗಿರಿಯಲ್ಲಿ ಪ್ರತ್ತಕ್ಷರಾಗಿದ್ದರು.
ಜಾಮೀನು ನೀಡುವ ಮುನ್ನ, ಲೋಕಾಯುಕ್ತ ಕಚೇರಿಗೆ ಹಾಜರಾಗಿ ತನಿಖೆಗೆ ಸಹಕಾರ ನೀಡಬೇಕೆಂದು ಕೋರ್ಟ್ ಆದೇಶಿಸಿತ್ತು.
ಹೀಗಾಗಿ ಅವರು ಇಂದು ಲೋಕಾಯುಕ್ತ ಕಚೇರಿಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಬೇಕಿದೆ. ನೀರೀಕ್ಷಣಾ ಜಾಮೀನು ಸಿಕ್ಕಿದ ಬಳಿಕ ಶಾಸಕರಿಗೆ ಲೋಕಾಯುಕ್ತ ಅಧಿಕಾರಿಗಳು ಮತ್ತೊಂದು ನೊಟೀಸ್ ನೀಡಿದ್ದಾರೆ. ಈಗಾಗಲೇ ಮನೆಯಲ್ಲಿ ಕೋಟಿ ಕೋಟಿ ಹಣ ದೊರೆತ ಹಿನ್ನೆಲೆಯಲ್ಲಿ ಮಾಡಾಳು ವಿಚಾರಣೆಗೆ ಅಧಿಕಾರಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆ. ಪುತ್ರ ಪ್ರಶಾಂತ್ ಮಾಡಾಳು ಹೇಳಿಕೆ ಹಾಗು ಉಳಿದ ಆರೋಪಿಗಳ ಹೇಳಿಕೆಯನ್ವಯ ಮಾಡಾಳು ವಿರೂಪಾಕ್ಷರ ವಿಚಾರಣೆ ನಡೆಯಲಿದೆ.