ಬಾಗಲಕೋಟೆ: 2008. 2013. ಹಾಗೂ 2019 2023 ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ರಾಜ್ಯದಲ್ಲಿರುವ ಸಮಸ್ತ ಲಕ್ಷಾಂತರ ನೇಕಾರರಿಗೆ ಸಾಮಾಜಿಕ ನ್ಯಾಯ ಸಿಕ್ಕಿರುವುದು ಸೂರ್ಯ ಚಂದ್ರನಂತೆ ಸತ್ಯ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ತೇರದಾಳ ಮತಕ್ಷೇತ್ರದ ನೇಕಾರರಿಂದ ಸುದ್ದಿ-ಗೋಷ್ಠಿ ನಡೆಯಿತು. ಕಳೆದ 50 ವರ್ಷಗಳಲ್ಲಿ ನೇಕಾರರಿಗೆ ಸಿಗದಿರುವ ಯೋಜನೆಗಳು ಇತ್ತೀಚನ 10 ವರ್ಷಗಳಲ್ಲಿ ಸಿಕ್ಕಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರೈತ ಹಾಗೂ ನೇಕಾರರು ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದ್ದಾರೆ ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ 1970 ರಲ್ಲಿ ಇಂದಿರಾಗಾಂಧಿ ಅವರು ಸ್ಥಾಪಿಸಿದ್ದು ಅವಸಾನದಂಚಿನಲ್ಲಿತ್ತು. ಮಾಜಿ ಸಿಎಂ ಯಡಿಯೂರಪ್ಪ ನಿಗಮಕ್ಕೆ ಆರ್ಥಿಕ ನೆರವು ನೀಡಿ ಅಲ್ಲಿರುವ ಸಾವಿರಾರು ಕೈಮಗ್ಗ ನೇಕಾರರಿಗೆ ಶಾಶ್ವತ ಉದ್ಯೋಗ ಮಾಡಲು ನೆರವಾದರು.
ರೈತರಂತೆ ನೈಕಾರರಿಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಸಹಕಾರಿ ಸಂಘಗಳ ಮುಖಾಂತರ ಸಾಲ ದೊರೆಯಲು ಆದೇಶವನ್ನು ಮಾಡಿದರು. ಸಂಕಷ್ಟ ಸಾಲದ ಸುಳಿಯಲ್ಲಿದ್ದ ಲಕ್ಷಾಂತರ ನೇಕಾರರಿಗೆ ಸಾಲ ಮನ್ನಾ ಯೋಜನೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇಕಾರರಿಗೆ ದುಡಿಯುವ ಬಂಡವಾಳ ಸಾಲವಾಗಿ ನೀಡುವ ಎರಡು ಲಕ್ಷ ರೂಪಾಯಿಗಳಿಗೆ ಶೂನ್ಯ ಬಡ್ಡಿಯಿಂದ ಸಿಗುವ ಹಾಗೆ ಮಾಡಿದ್ದು ನೇಕಾರರಿಗೆ ನೆರವಾಗಿದೆ. ರೈತ ಮಕ್ಕಳಂತೆ ನೇಕಾರ ಮಕ್ಕಳಿಗೂ ವಿದ್ಯಾರ್ಥಿವೇತನ ಪಡೆಯಲು ಅವಕಾಶ ಸಿಕ್ಕಿದ್ದು ಸಂತಸ.
ವಿದ್ಯುತ್ ರಿಯಾಯಿತಿ ನೇಕಾರ ಸಮಾನ ಯೋಜನೆ 5 ಹೆಚ್ ಪಿ ವರೆಗೆ ವಿದ್ಯುತ್ ಮಗ್ಗ ಘಟಕಗಳಿಗೆ ಉಚಿತ ವಿದ್ಯುತ್ ಪೂರೈಕೆ ಹಾಗೂ ಅಸಂಘಟಿತ ವಲಯಕ್ಕೆ ಸೇರಿಸಲು ಶಿಫಾರಸ್ಸು ಮಾಡಿದ್ದು ನಮಗೆ ಹೆಮ್ಮೆ.
ಕೆ ಎಚ್ ಡಿ ಸಿ ನೇಕಾರರಿಗೆ ವೈಟ್ ಸಂಕಷ್ಟದಲ್ಲಿದ್ದ ರೂ.30,000 ನೇಕಾರರಿಗೆ ವಿಶೇಷ ಕಾರ್ಮಿಕ ಇಲಾಖೆಯಿಂದ ಕಿಟ್ ಮತ್ತು 2 ಲಕ್ಷ ಪರಿಹಾರ ಇದ್ದದ್ದನ್ನು 5 ಲಕ್ಷದವರೆಗೆ ರಿಯಾಯಿತಿ ಮಾಡಿದ್ದು ಬಿಜೆಪಿ ಸರ್ಕಾರ.
ಬಾಗಲಕೋಟೆ ಜಿಲ್ಲೆಯಲ್ಲಿ 8 ಬ್ಯಾಂಕುಗಳಿಂದ ಸಿಸಿ ಲೋನ್ 179. 49 ಲಕ್ಷ ಸಾಲ ಮನ್ನಾ ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆ ಅಡಿಯಲ್ಲಿ 12,000 ನೇಕಾರರಿಗೆ 5 ಲಕ್ಷದಂತೆ 6 ಕೋಟಿ 18.288. ಜನ ವಿದ್ಯುತ್ ಮಗ್ಗಗಳ ನೇಕಾರರಿಗೆ ತಲಾ ಐದು ಸಾವಿರದಂತೆ 21 ಜನಕ್ಕೆ 30 ಲಕ್ಷ ರೂಪಾಯಿ. ಎಸ್ ಸಿ ಪಿ ಯಲ್ಲಿ 18 ಜನಕ್ಕೆ 54 ಲಕ್ಷ ರೂಪಾಯಿ. ಟಿಎಸ್ ಯಲ್ಲಿ 19 ಜನಕ್ಕೆ 56 ಲಕ್ಷ ರೂಪಾಯಿ ದೊರಕಿದ್ದು ಇತಿಹಾಸವೇ ಎಂದರು.
ತೇರದಾಳ ಮತಕ್ಷೇತ್ರದಲ್ಲಿ ನೇಕಾರ ಮತ್ತು ಕೈಮಗ್ಗ ನೇಕಾರರಿಗೆ 1 ಲಕ್ಷಗಳ ಸಾಲ ಮನ್ನಾ. ವಿದ್ಯುತ್ ಮಗ್ಗಳ ಖರೀದಿಗೆ ಸಹಾಯಧನ. ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿಗೆ ಸಹಾಯಧನ. ಶೇಕಡಾ ಒಂದು ಮತ್ತು ಶೇಕಡಾ ಮೂರರ ಬಡ್ಡಿ ಸಹಾಯಧನ. ಒಂದು ಲಕ್ಷಗಳ ಸಾಲ ಮನ್ನಾ ಯೋಜನೆ. ಕೈಮಗ್ಗ ನೇಕಾರರಿಗೆ ಸಮಾನ ಯೋಜನೆ. ವಿದ್ಯುತ್ ಮಗ್ಗಗಳ ನೇಕಾರರಿಗೆ ಕೋವಿಡ್ 19 ಪರಿಹಾರ. ಹೀಗೆ ಹಲವಾರು ನೇಕಾರರಿಗೆ ವಿಶೇಷ ಪ್ಯಾಕೇಜ್ ಗಳನ್ನು ತಂದು ತೇರದಾಳ ಮತಕ್ಷೇತ್ರ ನೇಕಾರರಿಗೆ ಒಟ್ಟು19227052 ಕೋಟಿಯಷ್ಟು ಹಣವನ್ನು ತಂದು ಅಭಿವೃದ್ಧಿ ಮಾಡಿದ ಶಾಸಕ ಸಿದ್ದು ಸವದಿ ಎಂದು ನೇಕಾರ ಮುಖಂಡ ಜಿ ಎಸ್ ಗೊಂಬೆ ಹೇಳಿದರು.
ಶಾಸಕ ಸಿದ್ದು ಸವದಿ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಅಲ್ಲಾ. ಲೇಖಿ ಮುಖಾಂತರ ನಾವು ಉತ್ತರ ನೀಡಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುರೇಶ ಚಿಂಡಕ. ರವಿ ಕರಲಟ್ಟಿ.ಬಸಪ್ರಭು ಹಟ್ಟಿ. ಚಿದಾನಂದ ಬೆಳಗಲಿ. ಚನ್ನಬಸು ಬಿಜಾಪುರ. ಪರಪ್ಪ ಬೆಳ್ಳೂರ. ಚಂದ್ರಕಾಂತ ಪರಪ್ಪ ಬರಗಲ. ಶಿವಪ್ಪ ಹಳ್ಳಿ. ರಾಜು ಜಮಕೇರಿ. ಪ್ರಭು ತೇರದಾಳ. ವೈಷ್ಣವಿ ಬಾಗೇವಾಡಿ. ಧನಂಜಯ್
ಹೊಸಕೋಟಿ. ಬಸು ಬೆಳಗಲಿ. ಶಿವಾನಂದ ತಂಗಡಿ. ಶ್ರೀಶೈಲ ಮೂಲಿಮನಿ. ಲಕ್ಕಪ್ಪ ಪವಾರ ಚೆಂದು ಕೋಳಿ. ಮಹೇಶ ಕಮತಗಿ. ಸಂಜಯ ತೆಗ್ಗಿ. ದರಪ್ಪ ಉಳ್ಳಾಗಡ್ಡಿ. ಮಹದೇವ ಕೋಟ್ಯಾಳ. ಶ್ರೀಮತಿ ಸವಿತಾ ಹೊಸೂರ. ಶ್ರೀಮತಿ ಮೀನಾಕ್ಷಿ ಸವದಿ ಸೇರಿದಂತೆ ಮುಂತಾದವು ಪಾಲ್ಗೊಂಡಿದ್ದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ