ಬೆಂಗಳೂರು: ಪ್ರತಿ ಸಲ ರಾಜ್ಯಕ್ಕೆ ಬರುವಾಗ ಸುಳ್ಳಿನ ಮೂಟೆಯನ್ನೇ ಪ್ರಧಾನಿ ಮೋದಿ ಹೊತ್ತು ತರುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಮೋದಿಯವರೇ, ನಿಮಗೆ ಚುನಾವಣಾ ಸಮಯದಲ್ಲಿ ಮಾತ್ರ ಕರ್ನಾಟಕ ನೆನಪಾಗುವುದ್ಯಾಕೆ? ಬರ ಬಂದಾಗ,ಪ್ರವಾಹ ಬಂದಾಗ ನಿಮಗೆ ಕರ್ನಾಟಕ ನೆನಪಾಗುವುದಿಲ್ಲ. ಆದರೆ ಚುನಾವಣಾ ಸಮಯದಲ್ಲಿ ನೀವು ಕರೆಯದೇ ಬರುವ ಅತಿಥಿ. ನೀವು ಈಗ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಪದೇ ಪದೇ ಬರುತ್ತೀರಿ?” ಎಂದು ಕಿಡಿಕಾರಿದ್ದಾರೆ. ಮೋದಿಯವರೇ, ಚುನಾವಣಾ ಸಮಯದಲ್ಲಿ ಕರ್ನಾಟಕಕ್ಕೆ ಬರಲು ನಿಮಗೆ ನೂರು ನೆಪಗಳು ಸಿಗುತ್ತವೆ.
ಆದರೆ ರಾಜ್ಯ ಸಂಕಷ್ಟದಲ್ಲಿರುವಾಗ ನೀವು ಇದ್ದಕ್ಕಿದ್ದಂತೆ ಎಸ್ಕೇಪ್ ಆರ್ಟಿಸ್ಟ್ ಆಗಿಬಿಡ್ತೀರಾ. ಲಾಭ ಇಲ್ಲದೆ ನೀವು ಕರ್ನಾಟಕದತ್ತ ತಲೆ ಹಾಕಿ ಕೂಡ ಮಲಗುವುದಿಲ್ಲ. ನೀವೊಂದು ರೀತಿ ‘ಶಾಲೆಗೆ ಚಕ್ಕರ್, ಊಟಕ್ಕೆ ಹಾಜರ್’ ಎಂಬ ಗಿರಾಕಿಯಂತಲ್ಲವೆ.?” ಎಂದು ವ್ಯಂಗ್ಯವಾಡಿದ್ದಾರೆ. ಮೋದಿಯವರೇ, ನೀವು ಪ್ರತಿ ಸಲ ಸುಳ್ಳಿನ ಮೂಟೆಯನ್ನೇ ಹೊತ್ತು ತರುತ್ತೀರಿ.ಯಥಾಪ್ರಕಾರ ಆ ಸುಳ್ಳಿನ ಕ್ಯಾಸೆಟ್ ಹಾಕಿ ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಿ.ನೀವು ಬಿಡುವಿದ್ದಾಗ ನಿಮ್ಮ ಭಾಷಣ ನೀವೇ ಕೇಳಿ,ಆಗ ನಿಮ್ಮ ಮೇಲೆ ನಿಮಗೆ ಜಿಗುಪ್ಸೆ ಬಂದು ಆತ್ಮಹತ್ಯಾ ಭಾವ ಕಾಡುವುದು ಸತ್ಯ. ಹೀಗಿರುವಾಗ ಎಷ್ಟು ದಿನ ಜನ ನಿಮ್ಮ ಸುಳ್ಳಿನ ಭಾಷಣ ಕೇಳಬೇಕು.?” ಎಂದು ಪ್ರಶ್ನೆ ಮಾಡಿದ್ದಾರೆ.