ಮಂಡ್ಯ: ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾದ ನಂತರ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿದ್ದು, ಸಕ್ಕರೆ ನಾಡಿನಲ್ಲಿ ಭಾನುವಾರ ಭರ್ಜರಿ ರೋಡ್ ಶೋ (Road Show) ನಡೆಸಿದರು.
ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯನ್ನು (Mysuru Bengaluru Expressway) ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಇದಕ್ಕೂ ಮೊದಲು ಮಂಡ್ಯದ ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್ವರೆಗೆ ರೋಡ್ ಶೋ ನಡೆದಿದ್ದು, ಈ ವೇಳೆ ಪ್ರಧಾನಿ ಮೋದಿ ಮೇಲೆ ಹೂವಿನ ಸುರಿಮಳೆಯಾಯಿತು. ಅಷ್ಟೇ ಅಲ್ಲದೇ ಸ್ವಾಗತಿಸಲು ಬಂದಿದ್ದ ಅಭಿಮಾನಿಗಳಿಗೆ ಪ್ರಧಾನಿ ಮೋದಿ ಅವರು ಹೂವುಗಳನ್ನು ಹಾಕಿ ಸಂಭ್ರಮಿಸಿದರು.
ಇದನ್ನೂ ಓದಿ: ಕಮಲ ಬಿಟ್ಟು ತೆನೆ ಹಿಡಿದ ಎ.ಮಂಜು: JDS ವರಿಷ್ಠ ದೇವೇಗೌಡರ ಸಮ್ಮುಖದಲ್ಲಿ ಸೇರ್ಪಡೆ
ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದರು. 1.8 ಕಿ.ಮೀ. ದೂರ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಯಿತು. ಮಂಡ್ಯದಲ್ಲಿ (Mandya) ಮೋದಿ ಹವಾ ಜೋರಾಗಿದ್ದು, ಈ ವೇಳೆ ನೆರೆದಿದ್ದ ಜನರು ಮೋದಿ, ಮೋದಿ ಎಂದು ಹಷೋದ್ಘಾರದಿಂದ ಘೋಷಣೆ ಕೂಗಿದರು. ಈ ವೇಳೆ ಸಹಸ್ರಾರು ಜನರು ಸೇರಿದ್ದು, ಅಭಿಮಾನಿಗಳು ಮೋದಿಯನ್ನು ನೋಡಲು ಉತ್ಸುಕರಾಗಿದ್ದು ಕಂಡುಬಂತು.