ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ(Karnataka Elections 2023) ಬಿಜೆಪಿ ಅಬ್ಬರದ ಪ್ರಚಾರ ಕೈಗೊಂಡಿದ್ದು, ರಾಜ್ಯದ ಚುನಾವಣ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದ್ರಲ್ಲೂ ರಾಷ್ಟ್ರೀಯ ನಾಯಕರ ಎಂಟ್ರಿಯಿಂದಾಗಿ ಅಬ್ಬರ ಜೋರಾಗಿದೆ. ಇಂದು ಕೂಡ ಮತಬೇಟೆ ಮುಂದುವರೆದಿದೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಇಂದು ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ(BJP Workers) ವರ್ಚುಯಲ್ ಸಂವಾದ ನಡೆಸಲಿದ್ದಾರೆ. ಈ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ.
ರಾಜ್ಯದ 58,112 ಬೂತ್ ಗಳಲ್ಲಿ 1680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ವರ್ಚುಯಲ್ ಸಂವಾದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ 15 ಕಡೆ ಪ್ರಧಾನಿ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಏಪ್ರಿಲ್ 27ರಂದು ಅಂದರೆ ಇಂದು ಬೆಳಗ್ಗೆ ಸಂವಾದ ನಡೆಯಲಿದೆ. ಬೂತ್ ಗಳಲ್ಲಿ ಟಿವಿ ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಸಿಸಲಾಗುವುದು.ಸಂವಾದದಲ್ಲಿ ಭಾಗವಹಿಸಲು 24 ಲಕ್ಷ ಕಾರ್ಯಕರ್ತರು ನಮೋ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿಗೆ ಸಂವಾದ ಏರ್ಪಡಿಸಲಾಗಿದೆ. 58 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಕಾರ್ಯಕರ್ತರು ಸಂವಾದ ವೀಕ್ಷಿಸಲಿದ್ದಾರೆ.