ಕೋಲಾರ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಯ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು, ಚುನಾವಣಾ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಅವರು ಮತ ಬೇಟೆಯಾಡಲಿದ್ದಾರೆ. ಏಪ್ರಿಲ್ 30 ರಂದು ಕೋಲಾರ ತಾಲೂಕಿನ ಕೆಂದಟ್ಟಿ ಗೇಟ್ ಬಳಿ ಸಾರ್ವಜನಿಕ ಸಭೆ, ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸದ ಎಸ್. ಮುನಿಸ್ವಾಮಿ ಅವರು ತಿಳಿಸಿದರು.
ನಗರದ ಹೊರವಲಯದ ಕೆಂದಟ್ಟಿ ಬಳಿ ಸುದ್ದಿಗಾರೊಂದಿಗೆ ಮಾತನಾಡಿದ್ರು. ಏಪ್ರಿಲ್ 30 ರಂದು ಬೆಳಗ್ಗೆ 9 ಗಂಟೆಗೆ ಕೋಲಾರಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಕರ್ನಾಟಕದ ದೇವ ಮೂಲೆಯಿಂದ ಚುನಾವಣಾ ಪ್ರಚಾರ ಆರಂಭವಾಗಲಿದೆ. ಇನ್ನು ಕೋವಿಡ್ ಸಂದರ್ಭದಲ್ಲಿ ಆರೋಗ್ಯವಾಗಿರಲು ಮೋದಿ ತೆಗೆದುಕೊಂಡ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಸಂಸದನಾಗಿ ಆಯ್ಕೆ ಆದಾಗಿನಿಂದ ಕೋಲಾರಕ್ಕೆ ಮೋದಿಯವರನ್ನು ಕರೆಸಬೇಕು ಎಂಬ ಆಸೆಯಿತ್ತು.
ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಶ್ರಮವಹಿಸುತ್ತೇವೆ. 9 ವರ್ಷದಿಂದ ಪ್ರಧಾನಿ ಮೋದಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೊಟ್ಟಿರುವ ಯೋಜನೆಗಳೇ ಶ್ರೀರಕ್ಷೆ. ಕೋಲಾರಕ್ಕೆ ರಿಂಗ್ ರೋಡ್, ಮೆಡಿಕಲ್ ಕಾಲೇಜು, ವಿಶ್ವಮಟ್ಟದ ದೊಡ್ಡ ಕಾರ್ಖಾನೆಗಳ ನಿರ್ಮಾಣ, ಕೃಷಿ ವಿಜ್ಞಾನ ಕೇಂದ್ರ ಮಾಡಲು ಬೇಡಿಕೆ ಇಡಲು ಚಿಂತನೆ ನಡೆಸಲಾಗಿದೆ. ಬಿಇಎಂಎಲ್ ಖಾಸಗೀಕರಣ ಮಾಡಬಾರದು ಎಂದು ದೆಹಲಿಯಲ್ಲಿ ಮಾತನಾಡಲಾಗಿದೆ. ಅದಕ್ಕೆ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ ಎಂದರು.
ರಾಹುಲ್ ಗಾಂದಿ ಇರುವೆ ಇದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಆನೆ ಇದ್ದಂತೆ. ರಾಹುಲ್ ಗಾಂಧಿ ಹೋದ ಕಡೆಯಲ್ಲ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ಆದ್ರೆ ಮೋದಿಯಂದ್ರೆ ಎಲ್ಲರೂ ಮೆಚ್ಚೋ ಅಂತದ್ದು. ಶತ್ರುಗಳ ಎದೆಯಲ್ಲಿ ಮೋದಿ ಹೆಸರು ಕೇಳಿದ್ರೆ ನಡುಕ ಉಂಟಾಗುತ್ತೆ. ಇನ್ನು ಕೋಲಾರ ಕ್ಷೇತ್ರದಲ್ಲಿ 7 ಬಾರಿ ಗೆದ್ದಿದ್ದ ಸಂಸದರ ಬಗ್ಗೆ ವಿರೋಧ ವ್ಯಕ್ತವಾಗಿ ಜನರೇ ಬದಲವಣೆ ಬಯಸಿ ನನ್ನನ್ನು ಗೆಲ್ಲಿಸಿದ್ದಾರೆ. ಇನ್ನು ಮಾಲೂರಿನ ಕಾಂಗ್ರೆಸ್ ಶಾಸಕ ನಂಜೇಗೌಡರ ಮೇಲೆ 50 ಕೇಸಿದೆ. ಹಾಲು, ಮೊಸರು, ಬೆಣ್ಣೆಯಲ್ಲಿ ಅಕ್ರಮ ಮಾಡಿದ್ದಾರೆ. ತಪ್ಪು ಮಾಡಿದವರು ಕಾನೂನಿಗೆ ತಲೆ ಬಾಗಲೇಬೇಕು ಎಂದು ವಾಗ್ದಾಳಿ ನಡೆಸಿದರು.